ಮಂಗಳವಾರ, ಅಕ್ಟೋಬರ್ 22, 2019
21 °C

ಸಸಿ ನೆಟ್ಟು ಜಯಂತಿ ಆಚರಣೆ

Published:
Updated:
Prajavani

ಕುದೂರು(ಮಾಗಡಿ): ‘ಮಾನವ ಪರಿಸರದ ಶಿಸು. ಕಾಡು ಹಸಿರಾಗಿದ್ಧಾಗ ಮಾತ್ರ ಬದುಕು ಹಸನಾಗಲು ಸಾಧ್ಯ’ ಎಂದು ಶಿಕ್ಷಣ ಲರ್ನಿಂಗ್ ಸೆಂಟರ್‌ನ ಉಪನ್ಯಾಸಕ ಕೆ.ಎಂ.ರಾಮು ತಿಳಿಸಿದರು.

ಇಲ್ಲಿನ ಭೈರವನ ದುರ್ಗದಲ್ಲಿ ಬುಧವಾರ ಗಾಂಧಿ ಜಯಂತಿ ಅಂಗವಾಗಿ ಸಸಿ ನೆಟ್ಟು, ನೀರೆರೆದು ಅವರು ಮಾತನಾಡಿದರು.

‘ಮುಂದಿನ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳು ಈಗಿನಿಂದಲೆ ಸಸಿ ನೆಟ್ಟು, ನೀರೆರೆದು ಪೋಷಿಸಿ, ಉತ್ತಮ ಪರಿಸರ ಸಂರಕ್ಷಣೆಗೆ ಪಣ ತೊಡಬೇಕು. ಉತ್ತಮ ಪರಿಸರ ಇಲ್ಲದಿದ್ದರೆ, ಮಳೆ ಬೆಳೆಯಾಗುವುದಿಲ್ಲ. ಹಣಿದಿಂದ ಇದನ್ನು ಖರೀದಿಸಲಾಗದು’ ಎಂದರು.

ಕಲಾವಿದ ಆರ್.ಮಹೇಶ್ ಮಾತನಾಡಿ, ‘ಮರ, ಗಿಡಗಳನ್ನು ಕತ್ತರಿಸದೆ, ಸಸಿನೆಟ್ಟು ಬೆಳೆಸಬೇಕು. ಮಳೆಯಿಂದ ಇಳೆ, ಇಳೆಯಿಂದ ಬೆಳೆ, ಬೆಳೆಯಿಂದಲೇ ಮನುಷ್ಯನ ಮುಖದಲ್ಲಿ ಕಳೆ ಮೂಡಲಿದೆ. ಸುತ್ತಲಿನ ಪರಿಸರ ರಕ್ಷಣೆ ಮತ್ತು ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು’ ಎಂದರು.

ವಿದ್ಯಾರ್ಥಿಗಳಾದ ಪಲ್ಲವಿ, ಮಾನಸ, ಭಾವನ, ಯಶಸ್ವಿನಿ, ಗೀತಾ, ದಿವ್ಯ, ಪೂಜಾ, ಚಂದನ್, ವಿವೇಕ್, ವೆಂಕಟೇಶ್, ಮುನಿರಾಜು, ಪೋಷಿತ್ ಬೆಟ್ಟದ ಮೆಟ್ಟಿಲುಗಳನ್ನು ಸ್ವಚ್ಛಗೊಳಿಸಿದರು. 101 ಸಸಿ ನೆಟ್ಟು ನೀರೆರೆದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)