ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

7ರಂದು ಅಕ್ಷಯ ತೃತೀಯ: ಒಡವೆ ಖರೀದಿ ಭರಾಟೆ ಜೋರು

Last Updated 6 ಮೇ 2019, 13:12 IST
ಅಕ್ಷರ ಗಾತ್ರ

ವಿಜಯಪುರ: ಅಕ್ಷಯ ತೃತೀಯದ ಪ್ರಯುಕ್ತ ಚಿನ್ನಾಭರಣಗಳ ಖರೀದಿಗಾಗಿ ಜನರು ಆಭರಣ ಅಂಗಡಿಗಳಲ್ಲಿ ಮುಂಗಡ ಹಣ ಕೊಟ್ಟು ಒಡವೆಗಳನ್ನುಆಯ್ಕೆ ಮಾಡಿ ಖರೀದಿಗೆಕಾದಿರಿಸಿದ್ದಾರೆ.

ಇಲ್ಲಿನ ಬಹುತೇಕ ಬಂಗಾರದ ಅಂಗಡಿಗಳಿಗೆ ಬರುತ್ತಿರುವ ಗ್ರಾಹಕರು ಒಂದು ಗ್ರಾಂ ನಿಂದ ಹಿಡಿದು 50 ಗ್ರಾಂನವರೆಗೂ ಒಡವೆಗಳನ್ನು ಸಿದ್ಧ ಮಾಡಿಸಿಕೊಳ್ಳುತ್ತಿದ್ದಾರೆ. ನೋಟು ರದ್ದತಿ ಮತ್ತು ಜಿಎಸ್‌ಟಿ ನಂತರ ಮಾರುಕಟ್ಟೆಯಲ್ಲಿ ಸ್ಥಿರತೆ ಕಂಡು ಬಂದಿದೆ. ಅಂಗಡಿಗಳ ಮಾಲೀಕರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ.

ಚಿನ್ನದ ಬೆಲೆ ವಾರದಿಂದ ಇಚೆಗೆ ಶೇ 8ರಷ್ಟು ಕಡಿಮೆಯಾಗಿದೆ. ಹಿಂದಿನ ವರ್ಷದ ಅಕ್ಷಯ ತೃತೀಯ ದಿನ ಚಿನ್ನದ ಬೆಲೆ ₹ 31,310 ರಷ್ಟಿತ್ತು. ಈ ವರ್ಷದ ಫೆಬ್ರುವರಿ ತಿಂಗಳಲ್ಲಿ ₹ 33,700 ರಷ್ಟಿತ್ತು. ಸದ್ಯದ ಬೆಲೆ ಇಳಿಮುಖವಾಗಿದೆ. ಅಪರಂಜಿ ಚಿನ್ನ 10 ಗ್ರಾಂ ಗೆ ₹ 32,640, ಆಭರಣ ಚಿನ್ನ ₹ 30,150 ರಷ್ಟಿದೆ. ವರ್ತಕರು ಗ್ರಾಹಕರನ್ನು ಸೆಳೆಯಲು ಪೈಪೋಟಿ ಮೇಲೆ ಆಕರ್ಷಕ ಕೊಡುಗೆಗಳನ್ನು ಪ್ರಕಟಿಸಿದ್ದಾರೆ.

ಕೆಲವು ಮಳಿಗೆಳವರು ಮುಂಚಿತವಾಗಿಯೇ ಬುಕ್ಕಿಂಗ್‌ ಸೌಲಭ್ಯ ಒದಗಿಸಿರುವುದರಿಂದ ಜನಸಂದಣಿಯ ನಡುವೆ ನಿಂತು ಚಿನ್ನಾಭರಣ ಕೊಂಡುಕೊಳ್ಳುವ ಪರಿಸ್ಥಿತಿ ಬರುವುದಿಲ್ಲ ಎಂದು ಗ್ರಾಹಕಿ ಸುಷ್ಮಾ ನಂದಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT