ಗುರುವಾರ , ನವೆಂಬರ್ 21, 2019
23 °C

‘ಗ್ರಾಮ ಸಭೆ ಮಾಹಿತಿ ವೇದಿಕೆಯಾಗಲಿ’

Published:
Updated:
Prajavani

ವಿಜಯಪುರ: ಗ್ರಾಮಸಭೆ ಸ್ಥಳೀಯರಿಗೆ ಸರ್ಕಾರದ ಯೋಜನೆ ಒದಗಿಸುವ ವೇದಿಕೆಗಳಾಗಬೇಕೆಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಚೈತ್ರಾವೀರೇಗೌಡ ಹೇಳಿದರು.

ಚನ್ನರಾಯಪಟ್ಟಣ ಹೋಬಳಿ ಬೂದಿಗೆರೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ 2019-20ನೇ ಸಾಲಿನ ಗ್ರಾಮಸಭೆ ಉದ್ಘಾಟಿಸಿ ಮಾತನಾಡಿದರು.

ತಾಲ್ಲೂಕಿನಲ್ಲಿ ಈ ಬಾರಿ ಉತ್ತಮವಾಗಿ ಮಳೆ ಆಗಿದೆ. ಬೆಳೆಗಳಿಗೆ ಬೀಳುವ ರೋಗ ತಡೆಗಟ್ಟಲು ಮುಂಜಾಗ್ರತವಾಗಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಹೇಳಿದರು. 

ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಶ್ರೀನಿವಾಸಗೌಡ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಸಕರ ಅನುದಾನ, ಜಿಲ್ಲಾ ಪಂಚಾಯಿತಿ ಸದಸ್ಯರ ಅನುದಾನದಡಿ ಅಭಿವೃದ್ಧಿ ಕೈಗೊಳ್ಳಲಾಗಿದೆ. ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಸರ್ಕಾರಿ ಶಾಲೆಗೆ ಶಿಕ್ಷಣಾಧಿಕಾರಿ ₹1.20ಲಕ್ಷ ಅನುದಾನ ನೀಡಿದ್ದಾರೆ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯೆ ಭಾರತಿ ಲಕ್ಷ್ಮಣಗೌಡ ಮಾತನಾಡಿ, ಹಳ್ಳಿಗಳು ಅಭಿವೃದ್ಧಿಯಾಗಬೇಕಾದರೆ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನದಿಂದ ಮಾತ್ರ ಸಾಧ್ಯವಾಗುವುದಿಲ್ಲ. ಸ್ಥಳೀಯರ ಸಹಕಾರವೂ ಮುಖ್ಯ ಎಂದರು. 

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುರುಡಯ್ಯ ಮಾತನಾಡಿ, ತಾಲ್ಲೂಕಿನಲ್ಲಿ ಪ್ರತಿವರ್ಷ ಕುಡಿಯುವ ನೀರಿನ ಸಮಸ್ಯೆ ತಲೆದೋರುತ್ತಲೇ ಇದೆ. ಜನರು ಲಭ್ಯವಿರುವ ನೀರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಗ್ರಾಮ ಪಂಚಾಯಿತಿ ನೋಡಲ್‌ ಅಧಿಕಾರಿ ಚನ್ನಬಸಪ್ಪ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪದ್ಮಾ, ಸದಸ್ಯರಾದ ಎಂ.ಎಸ್.ಶ್ರೀನಾಥಗೌಡ, ಮುರಳಿ, ಧನಲಕ್ಷ್ಮಿ, ಅಂಬಿಕಾ, ನಟರಾಜ್, ಶಾರದಮ್ಮ, ರಿಜ್ವಾನ್, ರಾಮಾಂಜಿನಯ್ಯದಾಸ್, ಮುನಿರಾಜು, ಷಂಷಾದ ಬೇಗಂ, ರಾಮಮೂರ್ತಿ, ಗೀತಾ, ಕಾರ್ಯದರ್ಶಿ ಲಕ್ಷ್ಮೀಪತಿ, ಮುಖಂಡ ಲಕ್ಷ್ಮಣಗೌಡ, ಪ್ರಭಾಕರ್, ವಿನೋದ ಇದ್ದರು.

ಪ್ರತಿಕ್ರಿಯಿಸಿ (+)