ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರಿ ಮಳೆ: ಕೆರೆಗಳಿಗೆ ನೀರು

ದೊಡ್ಡಬಳ್ಳಾಪುರ ಸುತ್ತಮುತ್ತ ನೆಲಕಚ್ಚಿದ ಬೆಳೆಗಳು
Last Updated 9 ಸೆಪ್ಟೆಂಬರ್ 2020, 15:45 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ತಾಲ್ಲೂಕಿನಾದ್ಯಂತ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆ, ಗಾಳಿಗೆ ಜೋಳದ ಬೆಳೆಗಳು ನೆಲಕಚ್ಚಿವೆ. ನಗರದ ತಗ್ಗು ಪ್ರದೇಶಗಳಲ್ಲಿನ ಮನೆಗಳಿಗೆ ಚರಂಡಿ ನೀರು ನುಗ್ಗಿದೆ.

ಮಂಗಳವಾರ ಒಂದೇ ರಾತ್ರಿಗೆ 74 ಮಿಲಿಮೀಟರ್‌ ಮಳೆಯಾಗಿದೆ. ನಗರದಲ್ಲಿನ ನಾಗರಕೆರೆ, ಮುತ್ತೂರು ಕೆರೆಗಳಲ್ಲಿ ಅರ್ಧಕ್ಕೂ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದೆ. ನಗರಸಭೆ ವ್ಯಾಪ್ತಿಯ ಭುವನೇಶ್ವರಿನಗರ, ಚೈತನ್ಯನಗರ ಸೇರಿದಂತೆ ಹಲವೆಡೆ ಮನೆಗಳಿಗೆ ಚರಂಡಿ ನೀರು ನುಗ್ಗಿದ್ದರಿಂದ ತಗ್ಗುಪ್ರದೇಶದ ನಿವಾಸಿಗಳು ರಾತ್ರಿ ಇಡೀ ಜಾಗರಣೆ ಮಾಡುವಂತಾಗಿತ್ತು.

ಕಸಬಾ ಹೋಬಳಿ ವ್ಯಾಪ್ತಿಯಲ್ಲಿ 74 ಮಿಲಿ ಮೀಟರ್‌, ಮಧುರೆ ಹೋಬಳಿ 68 ಮಿಲಿಮೀಟರ್‌, ದೊಡ್ಡಬೆಳವಂಗಲ ಹೋಬಳಿ 26 ಮಿಲಿಮೀಟರ್‌, ಸಾಸಲು ಹೋಬಳಿ 23 ಮೀ.ಮೀಟರ್‌ ಹಾಗೂ ತೂಬಗೆರೆ ಹೋಬಳಿ 16 ಮೀ.ಮೀಟರ್‌ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT