ಅಧಿಕಾರಿಗಳು ಭಾಗಿ, ಸರ್ಕಾರಕ್ಕೆ ನಷ್ಟ ಹೊಸಕೋಟೆ ತಾಲ್ಲೂಕಿನಲ್ಲಿ ಅಕ್ರಮವಾಗಿ ಮಣ್ಣು ಸಾಗಾಟ ಜೊತೆಗೆ ಲ್ಯಾಟರೈಟ್ ಮಣ್ಣನ್ನು ಮರ‍್ರಂ ದರದಲ್ಲಿ ಮಾರಾಟ ಮಾಡುತ್ತಿರುವುದು ಮತ್ತೊಂದು ದೊಡ್ಡ ಅಕ್ರಮ. ಈ ಅಕ್ರಮದಲ್ಲಿ ಅಧಿಕಾರಿಗಳು ಭಾಗಿಯಾಗಿದ್ದಾರೆ. ಸರ್ಕಾರಕ್ಕೆ ಇವರಿಂದ ದೊಡ್ಡ ನಷ್ಟ ಉಂಟಾಗುತ್ತಿದೆ. ಸರ್ಕಾರಿ ಬೊಕ್ಕಸಕ್ಕೆ ಮತ್ತು ಪರಿಸರ ನಾಶಕ್ಕೆ ಕಾರಣಕರ್ತರಾಗಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ವಿರುದ್ಧ ನ್ಯಾಯಾಯುತ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು.-ಹರೀಂದ್ರ, ಅಧ್ಯಕ್ಷ, ಸಿಐಟಿಯು ಹೊಸಕೋಟೆ ತಾಲ್ಲೂಕು
ಕೃಷಿ ಇಲಾಖೆಯಿಂದ ಅನುಮತಿ? ಮಣ್ಣು ಸಾಗಾಟಕ್ಕೆ ಅನುಮತಿ ನೀಡುವ ಸಂದರ್ಭದಲ್ಲಿ ಮಣ್ಣನ್ನು ಲ್ಯಾಬ್‌ಗೆ ತೆಗೆದುಕೊಂಡು ಹೋಗಿ ಅನಾಲಿಸಿಸ್ ಮಾಡಬೇಕು. ಕಬ್ಬಿಣ ಅಂಶ ಹೆಚ್ಚಿದ್ದರೆ ಅದು ಲ್ಯಾಟರೈಟ್, ಕಬ್ಬಿಣ ಅಂಶ ಕಡಿಮೆ ಇದ್ದರೆ ಅದು ಮರ‍್ರಂ, ಇದರಲ್ಲಿ ಲ್ಯಾಟರೈಟ್ ಮಣ್ಣಿನ ಹೆಚ್ಚು ಇದರಲ್ಲಿ ಸೀಮೆಂಟ್‌ಗೆ ಹೆಚ್ಚು ಬಳಕೆ ಮಾಡಿಕೊಳ್ಳುತ್ತಾರೆ. ಇದ್ಯಾವುದೂ ಇಲ್ಲಿ ನಡೆಯುತ್ತಿಲ್ಲ. ತಾಲ್ಲೂಕಿನಲ್ಲಿ ಕೆಲವರು ಮಣ್ಣು ಸಾಗಾಟಕ್ಕೆ ಸಂಬಂಧವೇ ಇಲ್ಲದ ಕೃಷಿ ಇಲಾಖೆಯಿಂದ ಪಡೆದುಕೊಂಡಿದ್ದೇವೆ ಎಂದು ಹೇಳಿ ನಕಲಿ ಅನುಮತಿ ಪತ್ರ ಇಟ್ಟುಕೊಂಡು ಮಣ್ಣು ಸಾಗಾಟ ಮಾಡುತ್ತಿದ್ದಾರೆ.ರವೀಂದ್ರ, ದಲಿತ ವಿದ್ಯಾರ್ಥಿ ಪೆಡರೇಷನ್, ಹೊಸಕೋಟೆ
ಮರ್ರಂ ಮಣ್ಣಿಗೆ ಮಾತ್ರ ಅನುಮತಿ ತಾಲ್ಲೂಕಿನಲ್ಲಿ ಲ್ಯಾಟರೈಟ್ ಮಣ್ಣಿಗೆ ಅನುಮತಿ ನೀಡಿಲ್ಲ. ಮರ‍್ರಂ ಮಣ್ಣಿಗೆ ಮಾತ್ರ ಅನುಮತಿ ನೀಡಿದ್ದೇವೆ. ತಾಲ್ಲೂಕಿನ ಹಂದೇನಹಳ್ಳಿ, ಪರಮನಹಳ್ಳಿ, ವಾಗಟ, ದೊಡ್ಡಹುಲ್ಲೂರು ಗ್ರಾಮಗಳ ಕೆರೆಗಳಲ್ಲಿ ಮಾತ್ರ ಮಣ್ಣು ತೆಗೆಯಲು ಅನುಮತಿ ನೀಡಿದ್ದೇವೆ. ಅಲ್ಲದೆ ಇಲಾಖೆಯ ಸಂಪೂರ್ಣ ಅಧಿಕಾರ ಜಿ.ಪಂ ಸಿಇಒ ಅವರದ್ದು. ಸ್ಥಳೀಯ ಗ್ರಾ.ಪಂ ಅಧಿಕಾರಿಗಳ ಮಾಹಿತಿಯಂತೆ ಅನುಮತಿ ನೀಡಿದ್ದೇವೆ. ಅನುಮತಿ ಪಡೆದ ನಂತರ ಕೆರೆಗಳಲ್ಲಿ ಹೂಳೆತ್ತುವ ಸಂದರ್ಭದಲ್ಲಿ ಎಲ್ಲವನ್ನೂ ಸ್ಥಳೀಯ ಗ್ರಾ.ಪಂನ ಅಧಿಕಾರಿಗಳೇ ನೋಡಿಕೊಳ್ಳಬೇಕು.ಸವಿತಾ ಕುಮಾರಿ, ಅಧಿಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ
ನಕಲಿ ಅನುಮತಿ ಪತ್ರ ಕೃಷಿ ಭೂಮಿ ಅಥವಾ ಯಾವುದೇ ಭೂಮಿಯಲ್ಲಿ ಮಣ್ಣು ತೆಗೆಯಲು ಅನುಮತಿ ನೀಡುವ ಅಧಿಕಾರ ನಮ್ಮ ವ್ಯಾಪ್ತಿಗೆ ಬರಲ್ಲ. ಹಿಂದಿನ ವರ್ಷದಲ್ಲಿ ಕೃಷಿ ಜಮೀನಿನ ಹಳ್ಳ ದಿನ್ನೆಗಳನ್ನು ಸಮತಟ್ಟು ಮಾಡಿ, ವ್ಯವಸಾಯ ಮಾಡಲು ಅನುಮತಿ ಕೊಟ್ಟಿದ್ದೇವೆ. ಮಣ್ಣು ಸಾಗಾಟಕ್ಕೆ ಅನುಮತಿ ನೀಡುವ ಅಧಿಕಾರ ಕೃಷಿ ಇಲಾಖೆಗಿಲ್ಲ. ಅಂತಹ ಅನುಮತಿ ಪತ್ರಗಳಿದ್ದರೆ ಅವು ನಕಲಿ ಪತ್ರ ಇರಬಹುದು. ಈ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಿಂದ ಪತ್ರ ಬಂದಿತ್ತು, ಅದನ್ನು ಪರಿಶೀಲಿಸಿ ಅದನ್ನು ನಾವು ನೀಡಿಲ್ಲ ಅದು ಪೋರ್ಜರಿ ಎಂದು ತಿಳಿಸಿದ್ದೇವೆ.ಚಂದ್ರಪ್ಪ, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.