ಹೊಸಕೋಟೆ: ವೀರಶೈವ ಧರ್ಮ ಜಾತಿ, ಮತ, ಪಂಥಗಳ ಗಡಿ ಮೀರಿ ವಿಶ್ವ ಬಂದುತ್ವದ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯ ಪ್ರತಿಪಾದಿಸಿದೆ. ಮಾನವೀಯ ಸಂಬಂಧ ಶಿಥಿಲಗೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಸಮುದಾಯಕ್ಕೆ ಸಂಸ್ಕಾರ ಮತ್ತು ಆದರ್ಶ ಶಿಕ್ಷಣ ನೀಡಬೇಕಿದೆ ಎಂದು ವಿಜಯಪುರದ ಬಸವ ಕಲ್ಯಾಣ ಮಠದ ಮಹದೇವ ಸ್ವಾಮೀಜಿ ತಿಳಿಸಿದರು.
ನಗರದ ಖಾಸಗಿ ಸಭಾಭವನದಲ್ಲಿ ನಡೆದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ನೂತನ ಕಾರ್ಯಕಾರಿ ಸಮಿತಿ ಸದಸ್ಯರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ದೊಡ್ಡ ಸಂಘಟನೆಯಾಗಿದ್ದು, ಅನೇಕ ಮಹನೀಯರು ಇಲ್ಲಿ ತಮ್ಮ ಸೇವೆ ಸಲ್ಲಿಸಿದ್ದಾರೆ. ಆದ್ದರಿಂದ ಪರಸ್ಪರ ದ್ವೇಷ, ಅಸೂಯೆ, ತೊರೆದು ಸಮುದಾಯ ಒಗ್ಗೂಡುವ ಮೂಲಕ ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿ ಅವರ ಹಾದಿಯಲ್ಲಿ ಸಾಗುವಂತಾಗಬೇಕು ಎಂದು ತಿಳಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಅಧ್ಯಕ್ಷ ಓರೋಹಳ್ಳಿ ಮಲ್ಲಿಕಾರ್ಜುನ್, ‘ಸಂಘಟನೆಯನ್ನು ತಾಲ್ಲೂಕಿನಲ್ಲಿ ಬೇರುಮಟ್ಟದಲ್ಲಿ ಬಲಪಡಿಸುವ ಕಾರ್ಯ ಮಾಡುತ್ತೇನೆ. ಸಮುದಾಯದವನ್ನು ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಮೇಲೆತ್ತುವ ಕಾರ್ಯ ಮಾಡುತ್ತೇನೆ’ ಎಂದರು.
ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಹುಲಿಕಲ್ ನಟರಾಜ್, ಹಿರಿಯ ಮುಖಂಡ ರುದ್ರಾರಾಧ್ಯ, ನಟರಾಜ್ ಶಾಸ್ತ್ರಿ, ಮಾಜಿ ಜಿಲ್ಲಾಧ್ಯಕ್ಷ ವಿರೂಪಾಕ್ಷ, ಬಸವ ಸಮಿತಿ ಅಧ್ಯಕ್ಷ ಮಂಜುನಾಥ್, ದೇವನಹಳ್ಳಿ ತಾಲ್ಲೂಕು ಅಧ್ಯಕ್ಷ ರಮೇಶ್, ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.
ನೂತನ ಪದಾಧಿಕಾರಿಗಳು
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಸದಸ್ಯರಾಗಿ ಟಿ.ಎಸ್.ರಾಜ್‌ಶೇಖರ್ ದೇವಲಾಪುರ ಸುವರ್ಣ ರಾಜಶೇಖರ್ ತಾಲ್ಲೂಕು ಮಹಾಸಭಾ ಅಧ್ಯಕ್ಷರಾಗಿ ಮಲ್ಲಿಕಾರ್ಜುನ್ ಉಪಾಧ್ಯಕ್ಷರಾಗಿ ಗುರುಬಸಪ್ಪ ಖಜಾಂಚಿ ದಯಾನಂದ್ ಕುಮಾರ್ ಕಾರ್ಯದರ್ಶಿ ಕುಮಾರ್ ಹಾಗೂ ಸದಸ್ಯರಾಗಿ ಮಂಜುನಾಥ್ ಭಾರತಿ ಎಸ್.ಸಿ.ಮಂಜುನಾಥ್ ಪ್ರವೀಣ್ ಕೆ.ಎಂ.ಮಂಜುನಾಥ್ ಬಸವಪ್ರಕಾಶ್ ನಂದೀಶಪ್ಪ ವಿಜಯ ನಾಗರಾಜ್ ಎನ್.ಆರ್.ನಾಗೇಶ್ ಬಿ ಮಂಜುನಾಥ್ ವಿದ್ಯ ಬಿಂದು ಶೈಲ ದ್ರಾಕ್ಷಾಯಿಣಿ ಚಂದ್ರಶೇಖರ್ ಬಸವರಾಜ್ ವೀಣಾ ಹಾಗೂ ಶಂಕರ್ ಆಯ್ಕೆಯಾಗಿದ್ದಾರೆ. ಎಲ್ಲರಿಗೂ ಆಯ್ಕೆ ಪ್ರಮಾಣ ಪತ್ರ ವಿತರಿಸಲಾಯಿತು.