ಶುಕ್ರವಾರ, ಜನವರಿ 24, 2020
16 °C

115 ಅಡಿ ಎತ್ತರದ ಸಾಯಿಕೋಟಿ ಮಹಾ ಸ್ತೂಪ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಆನೇಕಲ್: ತಾಲ್ಲೂಕಿನ ಇಂಡ್ಲವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಕಲಘಟ್ಟ ಸಮೀಪ ಶಿರಡಿ ಸಾಯಿಬಾಬಾ ಸೇವಾಶ್ರಮದ ವತಿಯಿಂದ ನಿರ್ಮಿಸಿರುವ 115 ಅಡಿ ಎತ್ತರದ ಸಾಯಿಕೋಟಿ ಮಹಾಸ್ತೂಪದ ಲೋಕಾರ್ಪಣೆ ಬುಧವಾರ ನಡೆಯಿತು.

ಆಂಧ್ರಪ್ರದೇಶದ ಅಮ್ಮಲಸಾಂಬಶಿವರಾವು ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 51 ಅಡಿ ಎತ್ತರದ ಸಾಯಿಕೋಟಿ ಮಹಾಸ್ತೂಪದ ಮೇಲೆ 64 ಎತ್ತರದ ಶಿರಡಿ ಸಾಯಿ ಬಾಬ ವಿಗ್ರಹದೊಂದಿಗೆ ಒಟ್ಟು 115 ಅಡಿ ಎತ್ತರದ ಮಹಾಸ್ತೂಪ ನಿರ್ಮಿಸಲಾಗಿದೆ.

ಕಾರ್ಯಕ್ರಮದ ಅಂಗವಾಗಿ ಒಂದು ವಾರದಿಂದ ಸತ್ಸಂಗ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಂಧ್ರಪ್ರದೇಶ ಸೇರಿದಂತೆ ವಿವಿಧೆಡೆಯಿಂದ ಬಂದಿದ್ದ ಸಾಯಿಸೇವಕರು ಗುರುದೇವರಿಂದ ದೀಕ್ಷೆ ಪಡೆದು ಬಾಬಾ ಜೀವನಚರಿತ್ರೆ, ಜೀವನದ ಪುಸ್ತಕಗಳನ್ನು ವಾಚನ ಮಾಡಿದರು.

ಕಾಕಡಾರತಿ, ಸಾಯಿಬಾಬಾ ಸುಪ್ರಭಾತ, ಅಭಿಷೇಕ, ಸಾಮೂಹಿಕ ಸಾಯಿ ಸತ್ಯ ವ್ರತ, ಶಾಂತಿಹೋಮ ನಡೆದವು. ಸಹಸ್ರಾರು ಮಂದಿ ಭಕ್ತರು ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು