‘ಮನಸ್ಸನ್ನು ಹತೋಟಿಯಲ್ಲಿಡುವ ಕರಾಟೆ’

ಮಂಗಳವಾರ, ಮಾರ್ಚ್ 19, 2019
20 °C

‘ಮನಸ್ಸನ್ನು ಹತೋಟಿಯಲ್ಲಿಡುವ ಕರಾಟೆ’

Published:
Updated:
Prajavani

ವಿಜಯಪುರ: ಕರಾಟೆಯು ದೇಹ ಮತ್ತು ಮನಸ್ಸನ್ನು ಹತೋಟಿಯಲ್ಲಿಡುವ ವಿಧಾನವನ್ನು ಕಲಿಸುತ್ತದೆ. ಇವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಟೇಕ್ವಾಂಡೊ ಸಂಸ್ಥೆಯ ಕಾರ್ಯದರ್ಶಿ ನಾರಾಯಣಸ್ವಾಮಿ ಹೇಳಿದರು.

ಇಲ್ಲಿನ ಜಿಕೆಬಿಎಂಎಸ್‌ ಶಾಲೆಯ ಆವರಣದಲ್ಲಿ ವಾರಿಯರ್ಸ್ ಟೇಕ್ವಾಂಡೊ ಅಕಾಡೆಮಿ ವತಿಯಿಂದ ನಡೆದ ಬೆಲ್ಟ್ ಎಕ್ಸಾಮ್‌ನಲ್ಲಿ ಅಕಾಡೆಮಿಯ 45 ವಿದ್ಯಾರ್ಥಿಗಳಿಗೆ ಬೆಲ್ಟ್‌ಗಳನ್ನು ವಿತರಿಸಿ ಅವರು ಮಾತನಾಡಿದರು.

ಇಂದಿನ ದಿನಮಾನಗಳಲ್ಲಿ ಶಾಲಾ, ಕಾಲೇಜುಗಳಲ್ಲಿ ಅಭ್ಯಾಸ ಮಾಡುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳು ಸ್ವಯಂ ರಕ್ಷಣೆಗಾಗಿ ಕರಾಟೆ ಕಲಿಯುವುದು ಅವಶ್ಯವಾಗಿದೆ ಎಂದರು.

ಅಕಾಡೆಮಿಯ ಮುಖ್ಯ ತರಬೇತುದಾರ ವಿ ಮುನಿಂದ್ರ ಮಾತನಾಡಿ, ಕರಾಟೆ ಮಾನಸಿಕವಾಗಿ ಸದೃಢತೆಯನ್ನು ಮೂಡಿಸುತ್ತದೆ. ವಿದ್ಯಾರ್ಥಿಗಳಲ್ಲಿ ನೆನಪಿನ ಶಕ್ತಿ ಹೆಚ್ಚಾಗುವುದರ ಜೊತೆಗೆ ಅವರನ್ನು ಆತ್ಮಸೈರ್ಯವನ್ನೂ ಕರಾಟೆ ಹೆಚ್ಚಿಸುತ್ತದೆ ಎಂದರು.

ಎಂ. ಧನುಷ್‌ಕುಮಾರ್, ಸಿಂಧು, ನರಹರಿಪ್ರಸಾದ್, ಚೇತನ್ ಹಾಗೂ ಯಶಸ್, ನಿರಂಜನ್ ಇವರಿಗೆ ಬ್ಲ್ಯಾಕ್ ಬೆಲ್ಟ್‌ಗಳನ್ನು ವಿತರಣೆ ಮಾಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !