ಶನಿವಾರ, ಡಿಸೆಂಬರ್ 7, 2019
22 °C

ಕ್ರೀಡಾಕೂಟ | ಕುಂದಾಣ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೇವನಹಳ್ಳಿ: ತಾಲ್ಲೂಕಿನ ಕುಂದಾಣ ಗ್ರಾಮದಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳು ಈಚೆಗೆ ನಡೆದ ತಾಲ್ಲೂಕು ಮಟ್ಟದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ದೈಹಿಕ ಶಿಕ್ಷಣ ಶಿಕ್ಷಕ ಯಲ್ಲಪ್ಪ ನಾಯಕ ತಿಳಿಸಿದ್ದಾರೆ.

ಪ್ರೌಢ ಶಾಲಾ ವಿಭಾಗದ ಬಾಲಕರ ವಿಭಾಗದ ಕಬಡ್ಡಿ ಸ್ವರ್ಧೆಯಲ್ಲಿ ಪ್ರಥಮ ಮತ್ತು ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಪ್ರಥಮ, ಪ್ರೌಢಶಾಲೆ ಬಾಲಕಿಯರ ವಿಭಾಗದಲ್ಲಿ ಕಬಡ್ಡಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಅಥ್ಲೇಟಿಕ್ಸ್ ವಿಭಾಗದಲ್ಲಿ ಪ್ರೌಢ ಶಾಲೆಯ ಅಕ್ಷಯ್ 1500 ಮೀ ಪ್ರಥಮ, ರಕ್ಷಿತಾ 1500 ಮೀ. ಪ್ರಥಮ, ಸಹನ 800 ಮೀ. ದ್ವಿತೀಯ, ಬಾಲಕಿಯರ 4–100 ರೀಲೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಪ್ರಾಥಮಿಕ ಶಾಲಾ ವಿಭಾಗ ಯೋಗೆಂದ್ರ 400 ಮೀ. ಪ್ರಥಮ, ಲಕ್ಷ್ಮೀಕಾಂತ್ ಗುಂಡು ಎಸೆತ ಪ್ರಥಮ, ವೆಂಕಟೇಶ್ ಪವಾರ್ 80 ಮೀ. ಹರ್ಡಲ್ಸ್‌ನಲ್ಲಿ ಪ್ರಥಮ, ದರ್ಶನಗೌಡ 600 ಮೀನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಪ್ರಭಾರಿ ಪ್ರಾಂಶುಪಾಲೆ ಎಂ.ಎಸ್. ಶ್ವೇತಾ, ಶಿಕ್ಷಕರಾದ ಹಜಾರೀಯಾ ಬಾನು, ಮೀನಾಕ್ಷಿ, ಗಾಯಿತ್ರಿ ಹೆಗಡೆ, ಶೈಲಜಾ, ಶಂಕರ್, ಯಶೋಧಮ್ಮ, ನಾರಾಯಣಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ಕೆ.ವಿ. ಸ್ವಾಮಿ ಇದ್ದರು.

 

ಪ್ರತಿಕ್ರಿಯಿಸಿ (+)