ಪ್ರಜಾವಾಣಿ ವಾರ್ತೆ

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಶುಕ್ರವಾರ ಪಂಜರ ಸ್ವಚ್ಛಗೊಳಿಸುತ್ತಿದ್ದ ಸಮಯದಲ್ಲಿ ಪ್ರಾಣಿ ಪಾಲಕರೊಬ್ಬರಿಗೆ ಚಿರತೆಯೊಂದು ಪರಚಿ ಗಾಯಗೊಳಿಸಿದೆ.

ಶಾಂತಪ್ಪ (48) ಗಾಯಗೊಂಡ ಪ್ರಾಣಿ ಪಾಲಕ. ಅವರು ಎಂದಿನಂತೆ ಪಂಜರವನ್ನು ಸ್ವಚ್ಛ ಮಾಡಲು ಚಿರತೆಯನ್ನು ಮತ್ತೊಂದು ಪಂಜರಕ್ಕೆ ಕಳುಹಿಸಿ ಸ್ವಚ್ಛ ಮಾಡುತ್ತಿದ್ದಾಗ ಕಬ್ಬಿಣದ ಮೆಶ್ ನಡುವೆ ಚಿರತೆ ಉಗುರುನಿಂದ ಪರಚಿದೆ. ಶಾಂತಪ್ಪ ಅವರ ಕೆನ್ನೆ ಮತ್ತು ಕುತ್ತಿಗೆ ಬಳಿ ಗಾಯವಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

‘ತಮ್ಮ ಪತಿ ಶಾಂತಪ್ಪ ಬನ್ನೇರುಘಟ್ಟ ಉದ್ಯಾನದಲ್ಲಿ ಕಳೆದ 25 ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಕಾಡಮ್ಮೆ ದಾಳಿಯಿಂದ ಗಾಯಗೊಂಡಿದ್ದರು. ಘಟನೆಯಿಂದ ಇಡೀ ಕುಟುಂಬವೇ ಭಯಗೊಂಡಿದೆ’ ಎಂದು ಪತ್ನಿ ಜಯಮ್ಮ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.