ಸೋಮವಾರ, ಸೆಪ್ಟೆಂಬರ್ 26, 2022
22 °C

ಮಹಿಳಾ ಕಾನೂನು ಸದ್ಬಳಕೆಯಾಗಲಿ - ಉಪನ್ಯಾಸ ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ(ಬೆಂ.ಗ್ರಾಮಾಂತರ): ಪಟ್ಟಣದ ರೋಟರಿ ಶಾಲಾ ಸಭಾಂಗಣದಲ್ಲಿ ಮಂಗಳವಾರ ಇನ್ನರ್‌ವ್ಹೀಲ್ ಕ್ಲಬ್ ಆಫ್ ವಿಜಯಪುರದಿಂದ ‘ಕುಟುಂಬದ ಬೆಳವಣಿಗೆಯಲ್ಲಿ ಮಹಿಳೆಯ ಪಾತ್ರ’ ಎಂಬ ವಿಷಯ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಶಿಕ್ಷಕಿ ಗಿರಿಜಾಂಬ ರುದ್ರೇಶ್ ಮೂರ್ತಿ ಮಾತನಾಡಿ, ಮಹಿಳೆಗೆ ಸಮಾಜದಲ್ಲಿ ಗೌರವ ಸ್ಥಾನವಿದೆ. ಕೆಲವೇ ಕಿಡಿಗೇಡಿಗಳಿಂದ ಮಾತ್ರ ಕಿರುಕುಳ ನಡೆಯುತ್ತಿದೆ. ಮಹಿಳೆಯರಿಗಾಗಿ ಸಾಕಷ್ಟು ಕಾನೂನುಗಳಿದ್ದು ಇವುಗಳನ್ನು ಸದುಪಯೋಗ ಪಡಿಸಿಕೊಂಡು ನ್ಯಾಯ ಪಡೆಯಬೇಕು ಎಂದು ಸಲಹೆ ನೀಡಿದರು.

ವರದಕ್ಷಿಣೆ ಕಿರುಕುಳ ಸೇರಿದಂತೆ ಇನ್ಯಾವುದೇ ತೊಂದರೆ ಇದ್ದರೆ ಕಾನೂನಿನಲ್ಲಿ ರಕ್ಷಣೆಯಿದೆ. ಯಾವುದೇ ಒಂದು ಕುಟುಂಬ ಉತ್ತಮವಾಗಿ ಉನ್ನತ ಸ್ಥಾನಕ್ಕೆ ಹೋಗಬೇಕಾದರೆ ವಿದ್ಯಾವಂತ ಮಹಿಳೆಯರಿಂದ ಮಾತ್ರ ಸಾಧ್ಯ. ಆದ್ದರಿಂದ ಪ್ರತಿಯೊಬ್ಬ ಮಹಿಳೆಯರು ಉತ್ತಮ ಶಿಕ್ಷಣ ಪಡೆಯುವ ಜೊತೆಗೆ ಮಕ್ಕಳನ್ನು ಶಿಕ್ಷಿತರನ್ನಾಗಿಸಿ ಮಾಡಬೇಕು. ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಹೋಗಲು ನೆರವಾಗಬೇಕು ಎಂದು ಸಲಹೆ ನೀಡಿದರು.

ಇನ್ನರ್‌ವ್ಹೀಲ್ ಕ್ಲಬ್‌ ಅಧ್ಯಕ್ಷೆ ಹೇಮಾ ಸುರೇಶ್ ಮಾತನಾಡಿ, ಭಾರತೀಯ ಸಮಾಜದಲ್ಲಿ ಸ್ತ್ರೀಗೆ ಉನ್ನತ ಸ್ಥಾನ ನೀಡಲಾಗಿದೆ. ಶಕ್ತಿಯ ಪ್ರತೀಕವಾಗಿ ಬಿಂಬಿಸಲಾಗಿದೆ. ಇಡೀ ಜಗತ್ತಿಗೆ ಕಾರಣೀಭೂತಳನ್ನಾಗಿ ಪೂಜಿಸಲಾಗುತ್ತದೆ ಎಂದರು.

ಮಹಿಳೆಯು ಆಧ್ಯಾತ್ಮಿಕ, ಧಾರ್ಮಿಕ, ನೈತಿಕ ಮೌಲ್ಯವನ್ನು ವರ್ಗಾಯಿಸಬಲ್ಲ ಮಾಧ್ಯಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ. ಇದರಿಂದ ಐತಿಹಾಸಿಕ ಮತ್ತು ಮಾನವೀಯ ವ್ಯಕ್ತಿಗಳನ್ನು ಕಾಣಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಕ್ಲಬ್‌ ಕಾರ್ಯದರ್ಶಿ ವೀಣಾ ನಟಶೇಖರ್ ಮಾತನಾಡಿದರು. ಮಾಜಿ ಅಧ್ಯಕ್ಷೆ ಮಾಲತಿ ಆನಂದ್, ಚಂದ್ರಕಲಾ ರುದ್ರಮೂರ್ತಿ, ದೀಪಾ ಮುರಳೀಧರ್, ರಾಧಾ ಚಂದ್ರಪ್ಪ, ನಳಿನಿ ಶಾಂತಕುಮಾರ್, ಅನುಸೂಯಮ್ಮ ಸಂಪತ್, ಮಂಜುಳಾ ಕಿರಣ್, ಪ್ರೇಮಾ ನಾಗರಾಜಪ್ಪ, ರೀಟಾ, ಗೀತಾ ಮಹದೇವ್, ಪ್ರೀತಿ ಮಹೇಶ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು