‘ಪತ್ರ ಬರಹಗಾರರ ಜವಾಬ್ದಾರಿ ಮಹತ್ವದ್ದು’

7

‘ಪತ್ರ ಬರಹಗಾರರ ಜವಾಬ್ದಾರಿ ಮಹತ್ವದ್ದು’

Published:
Updated:
Prajavani

ದೊಡ್ಡಬಳ್ಳಾಪುರ: ತಾಲ್ಲೂಕು ಪರವಾನಗಿ ದಸ್ತಾವೇಜು ಪತ್ರ ಬರಹಗಾರರ ಸಂಘವನ್ನು ಜಿಲ್ಲಾ ನೋಂದಣಾಧಿಕಾರಿ ಹಾಗೂ ಮುದ್ರಾಂಕಗಳ ಉಪ ಆಯುಕ್ತರಾದ ಸವಿತಾ ಲಕ್ಷ್ಮೀ ಕೆ.ಬಿ.ಬೆಳಗಲಿ ಉದ್ಘಾಟಿಸಿದರು.

ಅವರು ಮಾತನಾಡಿ, ಪತ್ರ ಬರಹಗಾರರ ಜವಾಬ್ದಾರಿ ಅತ್ಯಂತ ಮಹತ್ವದ್ದು. ಭೂಮಿ ಬೆಲೆ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ದಾಖಲೆಗಳ ಪರಿಶೀಲನೆ ಹಾಗೂ ಪತ್ರದಲ್ಲಿನ ಒಂದೊಂದು ಸಾಲು ಕೂಡ ಮುಖ್ಯವಾಗಿದೆ. ಎಲ್ಲ ವ್ಯವಹಾರಗಳು ಆನ್ ಲೈನ್ ಆಗುತ್ತಿರುವ ಸಂದರ್ಭದಲ್ಲಿ ಪತ್ರ ಬರಹಗಾರರು ಎಚ್ಚರದಿಂದ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ದೊಡ್ಡಬಳ್ಳಾಪುರ ಹಿರಿಯ ಉಪನೋಂದಣಾಧಿಕಾರಿ ಕೆ.ಬಿ.ಜಯಕುಮಾರ್, ಎಸ್.ಪಿ.ರಂಗರಾಜು, ನಿವೃತ್ತ ನೋಂದಣಾಧಿಕಾರಿ ಎಚ್.ಎಸ್.ಸೋಮಶೇಖರ್, ಸಂಘದ ಅಧ್ಯಕ್ಷ ಕೆ.ಬಿ.ಹನುಮಂತಯ್ಯ, ಉಪಾಧ್ಯಕ್ಷ ಎಸ್.ಜಯಣ್ಣ, ಕಾರ್ಯದರ್ಶಿ ಎನ್.ತಿರುಮಲೇಶ್, ಸಹ ಕಾರ್ಯದರ್ಶಿ ಆರ್.ಸೌಮ್ಯ, ಖಜಾಂಚಿ ಕೆ.ವಿ.ಶ್ರೀನಿವಾಸ, ಸಹಲಹೆಗಾರ ಕೆ.ಬಿ.ನಾಗರಾಜ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !