ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಕೋಟೆ: ಜನರ ಏಳಿಗೆಗೆ ಶ್ರಮಿಸಿದ ಯೋಗಿ ನಾರೇಯಣ

Last Updated 8 ಮಾರ್ಚ್ 2023, 6:07 IST
ಅಕ್ಷರ ಗಾತ್ರ

ಹೊಸಕೋಟೆ: ಯೋಗಿ ನಾರೇಯಣ ಯತೀಂದ್ರರು ಯಾವುದೇ ಜಾತಿ, ಧರ್ಮದ ಪರ ನಿಲ್ಲದೆ ಕಾಲಜ್ಞಾನಿಯಾಗಿ ಸಮಾಜದ ಏಳಿಗೆಗೆ ಶ್ರಮಿಸಿದ್ದಾರೆ ಎಂದು ಶಾಸಕ ಶರತ್‌ ಬಚ್ಚೇಗೌಡ ತಿಳಿಸಿದರು.

ತಾಲ್ಲೂಕು ಆಡಳಿತ ಹಾಗೂ ಬಲಿಜ ಸಂಘದಿಂದ ಮಂಗಳವಾರ ತಾಲ್ಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಯೋಗಿ ನಾರೇಯಣ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಫಾಲ್ಗುಣ ಮಾಸದ ಹುಣ್ಣಿಮೆ ಯಂದು ಯೋಗಿ ನಾರೇಯಣ ಜಯಂತಿ ಆಚರಣೆ ಮಾಡಲಾಗುತ್ತಿದೆ. ಸರ್ಕಾರದ ಆದೇಶದನ್ವಯ ಯತಿ ಗಳ ಜಯಂತಿ ಆಚರಣೆ ಮಾಡಿ ಅವರ ತತ್ವಾದರ್ಶಗಳನ್ನು ಪ್ರಚಾರ ಮಾಡಲು ಸಹಕಾರಿಯಾಗಿದೆ. ಎಲ್ಲಾ ಸಮುದಾಯದ ಮುಖಂಡರು ಒಗ್ಗಟ್ಟಾಗಿ ಕೈವಾರ ತಾತಯ್ಯ ಅವರ ಮಾತುಗಳನ್ನು ಪಸರಿಸಬೇಕು ಎಂದು ಸಲಹೆ ನೀಡಿದರು.

ಹೊಸಕೋಟೆ ಟೌನ್‌ ಅಥವಾ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ಬಲಿಜ ಸಂಘಕ್ಕೆ ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ಇರುವ ಜಾಗ ಗುರುತಿಸಿ ಹಸ್ತಾಂತರಿಸುವ ಕೆಲಸವನ್ನು ಶೀಘ್ರದಲ್ಲೇ ಮಾಡಲಾಗುವುದು. ಸರ್ಕಾರ ಕೂಡ ಸಮುದಾಯದ ಶಿಕ್ಷಣಕ್ಕಷ್ಟೇ ಅಲ್ಲದೇ ಉದ್ಯೋಗದಲ್ಲೂ ಮೀಸಲಾತಿ ಕೊಡುವ ಕೆಲಸ ಆಗಬೇಕು. ಆದ್ದರಿಂದ ಸಮುದಾಯದವರ ಹೋರಾಟ ಬೆಂಬಲಿಸಲು ಸದಾ ಸಿದ್ಧ ಎಂದು ತಿಳಿಸಿದರು.

ಬಲಿಜ ಸಂಘದ ತಾಲ್ಲೂಕು ಅಧ್ಯಕ್ಷ ಮುನಿರಾಜ್‌ ಮಾತನಾಡಿ, ಇಡೀ ಮನುಕುಲದ ಉಳಿವಿಗಾಗಿ ಕೈವಾರ ತಾತಯ್ಯ ತಪೋ ಜ್ಞಾನದಿಂದ ಸಂದೇಶ ನೀಡಿದ ಮಹನೀಯರಾಗಿದ್ದಾರೆ. ಜಾತಿ ಭೇದವಿಲ್ಲದೇ ಎಲ್ಲರೂ ಜಯಂತಿ ಆಚರಣೆ ಮಾಡುತ್ತಿರುವುದು ಸಂತಸದ ವಿಚಾರ. ಸಮುದಾಯಕ್ಕೆ ಪ್ರವರ್ಗ 2ಎ ಮೀಸಲಾತಿ ನೀಡಿ ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಲು ಸರ್ಕಾರ ಸಹಕಾರ ನೀಡಬೇಕಿದೆ ಎಂದುದರು.

ಯೋಗಿ ನಾರೇಯಣ ಜಯಂತಿ ಅಂಗವಾಗಿ ಪ್ರತಿ ಹೋಬಳಿ ಕೇಂದ್ರದಿಂದ ಕೈವಾರ ತಾತಯ್ಯ ಅವರ ಭಾವಚಿತ್ರದ ಪಲ್ಲಕ್ಕಿ ವಾಹನಗಳು ಹೊಸಕೋಟೆ ತಾಲ್ಲೂಕಿನ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದವು.

ಟೌನ್‌ ಬಲಿಜ ಸಂಘದ ಅಧ್ಯಕ್ಷ ಭರತ್, ಮುಖಂಡರಾದ ಮುರಳೀಧರ್, ಚಿನ್ನಣ್ಣ, ಉಪ ತಹಶೀಲ್ದಾರ್‌ ಪ್ರಭಾಕರ್, ಮುತ್ಕೂರು ಮಹೇಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT