ರುದ್ರೇಶ್ವರ ಸ್ವಾಮಿ ರಥೋತ್ಸವ

ಶನಿವಾರ, ಮಾರ್ಚ್ 23, 2019
21 °C

ರುದ್ರೇಶ್ವರ ಸ್ವಾಮಿ ರಥೋತ್ಸವ

Published:
Updated:
Prajavani

ನೆಲಮಂಗಲ: ಪಟ್ಟಣದ ಹೃದಯ ಭಾಗವಾದ ಅಡೇಪೇಟೆಯಲ್ಲಿ ಶ್ರೀರುದ್ರೇಶ್ವರಸ್ವಾಮಿಯ ಬ್ರಹ್ಮರಥೋತ್ಸವ ಮಂಗಳವಾರ ವೈಭವದಿಂದ ನಡೆಯಿತು.

ಪ್ರತಿ ವರ್ಷ ಮಹಾಶಿವರಾತ್ರಿ ಹಬ್ಬದ ಮರುದಿನ ಈ ರಥೋತ್ಸವ ನಡೆಯುತ್ತದೆ. ತಾಲ್ಲೂಕು ಮತ್ತು ಜಿಲ್ಲೆಯ ನಾನಾ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಶ್ರೀರುದ್ರೇಶ್ವರಸ್ವಾಮಿಗೆ ಹಣ್ಣುಕಾಯಿ ಅರ್ಪಿಸಿದರು.

ಬ್ರಹ್ಮರಥೋತ್ಸವಕ್ಕೂ ಮುನ್ನ ಸೋಮವಾರವೇ ಗಂಗಾದೇವತಾ ಗಣಪತಿ ಪೂಜೆ, ನವಗ್ರಹ ಕಲಶ ಸ್ಥಾಪನೆ ಹಾಗೂ ಹವನ ನಡೆಯಿತು. ಕರಡಿಮೇಳ, ವೀರಗಾಸೆ ನೃತ್ಯ, ಕಂಸಾಳೆ, ನಂದಿಧ್ವಜ ಜಾತ್ರೆಗೆ ರಂಗು ನೀಡಿದವು. ಪಟ್ಟಣದ ಪವಾಡ ಶ್ರೀಬಸವಣ್ಣ ದೇವರಮಠದ ಶ್ರೀಸಿದ್ದಲಿಂಗಸ್ವಾಮೀಜಿ ಉತ್ಸವಕ್ಕೆ ಚಾಲನೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !