ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಹಾರ್ದ ಕದಡುವ ಗೋಡೆ ಬರಹ: ಕಾನ್‌ಸ್ಟೆಬಲ್‌ ವಿರುದ್ಧ ದೂರು

ದೂರು
Published 30 ಏಪ್ರಿಲ್ 2024, 14:33 IST
Last Updated 30 ಏಪ್ರಿಲ್ 2024, 14:33 IST
ಅಕ್ಷರ ಗಾತ್ರ

ಆನೇಕಲ್: ಪೊಲೀಸ್‌ ಕಾನ್‌ಸ್ಟೆಬಲ್‌ ಒಬ್ಬರು ತಮ್ಮ ಮನೆ ಗೋಡೆ ಮೇಲೆ ಮತೀಯ ಸೌಹಾರ್ದ ಕದಡುವ ಗೋಡೆ ಬರಹ ಬರೆದಿರುವ ಘಟನೆ ತಾಲ್ಲೂಕಿನ ಸೂರ್ಯಸಿಟಿ ಪೊಲೀಸ್‌ ಠಾಣೆ ವ್ಯಾಪ್ತಿಯ ಬಂಡಾಪುರದಲ್ಲಿ ನಡೆದಿದೆ.

ಬೆಂಗಳೂರಿನ ಬಾಣಸವಾಡಿ ಠಾಣೆಯಲ್ಲಿ ಕಾನ್‌ಸ್ಟೆಬಲ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಮುನಿರಾಜು ಬಂಡಾಪುರದ ತಮ್ಮ ಮನೆ ಕಾಂಪೌಂಡ್‌ ಮೇಲೆ ಕೋಮು ಸೌಹಾರ್ದ ಕದಡುವ ಗೋಡೆ ಬರಹ ಇಂಗ್ಲಿಷ್‌ನಲ್ಲಿ ಬರೆದಿದ್ದರು. ಇದನ್ನು ಗಮನಿಸಿದ ರಾಜು ಎಂಬುವವರು ಇಂತಹ ಬರವಣಿಗೆ ಬರೆಯಬಾರದು ಅಳಿಸಿ ಹಾಕಿ ಎಂದು ಹೇಳಿದ್ದರು. ಆದರೆ, ಮುನಿರಾಜು ’ನನ್ನ ಜಾಗ ನನ್ನ ಮನೆ ನನ್ನ ಇಷ್ಟದಂತೆ ಬರೆಯುತ್ತೇನೆ’ ಎಂದು ತಿಳಿಸಿದ್ದರು. ಈ ಸಂಬಂಧ ಬಂಡಾಪುರ ಪಿ.ರಾಜು ಎಂಬುವವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಸೂರ್ಯಸಿಟಿ ಪೊಲೀಸರು ಮುನಿರಾಜು ವಿರುದ್ಧ ಪ್ರಕಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT