ಸೋಮವಾರ, ಮಾರ್ಚ್ 1, 2021
30 °C
ನಳಂದಾ ರೆಸಿಡೆನ್ಸಿಯಲ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ವಸ್ತು ಪ್ರದರ್ಶನ

‘ವಿಜ್ಞಾನ ವಿಷಯ ಅಧ್ಯಯನ ಬಹು ಮುಖ್ಯ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ವಿಜಯಪುರ: ವಿದ್ಯಾರ್ಥಿಗಳ ಜೀವನದಲ್ಲಿ ವಿಜ್ಞಾನ ವಿಷಯ ಅಧ್ಯಯನ ಬಹು ಮುಖ್ಯವಾಗಿದ್ದು, ಆವಿಷ್ಕಾರಗಳ ಬಗ್ಗೆ ಮಾಹಿತಿ ಮತ್ತು ತಿಳಿವಳಿಕೆ ಹೊಂದುವುದರಿಂದ ಜ್ಞಾನ ಹೆಚ್ಚುವುದಲ್ಲದೆ ಶೈಕ್ಷ ಣಿಕವಾಗಿ ಪ್ರಗತಿಯನ್ನು ಕಾಣಬಹುದು ಎಂದು ನಳಂದಾ ರೆಸಿಡೆನ್ಸಿಯಲ್ ಇಂಟರ್ ನ್ಯಾಷನಲ್ ಶಾಲೆಯ ಕಾರ್ಯದರ್ಶಿ ಚೌಡಪ್ಪನಹಳ್ಳಿ ಲೊಕೇಶ್ ಹೇಳಿದರು.

ಚನ್ನರಾಯಪಟ್ಟಣ ಹೋಬಳಿ ಚೌಡಪ್ಪನಹಳ್ಳಿ ನಳಂದಾ ರೆಸಿಡೆನ್ಸಿಯಲ್ ಇಂಟರ್ ನ್ಯಾಷನಲ್ ಶಾಲೆಯ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಹೊರತರಲು ಶಿಕ್ಷ ಕರು ಇಂಥ ವೇದಿಕೆಗಳನ್ನು ನಿರ್ಮಾಣ ಮಾಡುವುದು ಅವಶ್ಯಕ. ಚಿತ್ರಕಲೆ, ವಿಜ್ಞಾನ ಮಾದರಿಗಳ ತಯಾರಿಕೆ ಮಕ್ಕಳಲ್ಲಿ ಸೃಜನಶೀಲತೆ ಹೆಚ್ಚಿಸುವ ಜತೆಗೆ ಕಲಿಕೆಯಲ್ಲಿ ಆಸಕ್ತಿ ಮೂಡುವಂತೆ ಮಾಡುತ್ತದೆ. ಚಿತ್ರಕಲೆ ಮಕ್ಕಳಲ್ಲಿ ಏಕಾಗ್ರತೆ ಮೂಡಿಸುತ್ತದೆ. ಆದ್ದರಿಂದ ಇಂಥ ಚಟುವಟಿಕೆಯಾಧಾರಿತ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ಹಮ್ಮಿಕೊಂಡಾಗ ಮಾತ್ರ ಮಕ್ಕಳಲ್ಲಿ ಶೈಕ್ಷ ಣಿಕ ಪ್ರಗತಿ ನಿರಿಕ್ಷಿಸಬಹುದಾಗಿದೆ ಎಂದರು.

ಶಾಲೆಯ ಮುಖ್ಯಸ್ಥ ಹರೀಶ್ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾಭ್ಯಾಸದೊಂದಿಗೆ ಅದಕ್ಕೆ ಪೂರಕವಾಗಿ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಉತ್ತಮ ವಿದ್ಯಾರ್ಥಿಯಾಗಲು ಸಾಧ್ಯ. ಕಲಿಕೆ ಎಂಬುದು ಕೇವಲ ಓದು-ಬರಹಕ್ಕಷ್ಟೇ ಸೀಮಿತವಾದುದಲ್ಲ ಎಂದು ತಿಳಿಸಿದರು.

ಕ್ರೀಡೆ ನೃತ್ಯ, ಸಂಗೀತ, ಕಲೆ, ಯೋಗ,ಕಲಾ ಪ್ರದರ್ಶನ ಮೊದಲಾದವು ಕಲಿಕೆಗೆ ಪೂರಕವಾಗಿದ್ದು, ಅವು ಶಿಕ್ಷಣದ ಅವಿಭಾಜ್ಯ ಅಂಗವಾಗಿವೆ. ಮಕ್ಕಳು ಶಾಲೆಗಳಲ್ಲಿ ಆಯೋಜಿಸುವಂತಹ ಇಂತಹ ಕಾರ್ಯಕ್ರಮಗಳನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಶಾಲೆಯ ಮುಖ್ಯಶಿಕ್ಷಕಿ ಜೆ.ಮೇರಿ ಸೆಲ್ವಿನ್ ಮಾತನಾಡಿ, ಮಾನದಂಡವೆಂದು ಭಾವಿಸದೆ ಸ್ಪರ್ಧಾ ಮನೋಭಾವವನ್ನು ಮೈಗೂಡಿಸಿಕೊಂಡು ಪಾಲ್ಗೊಳ್ಳುವಿಕೆಯೇ ದೊಡ್ಡ ಬಹುಮಾನವೆಂದು ಪರಿಗಣಿಸಿದಾಗ ಹೆಚ್ಚು ಸೃಜನಶೀಲರಾಗಿ ಕಲಿತು- ಬೆಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಮಕ್ಕಳು ತಯಾರಿಸಿದ ವಿಜ್ಞಾನದ ಮಾದರಿಗಳನ್ನು ವೀಕ್ಷಣೆ ಮಾಡಿದ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.

ನಲ್ಲೂರು ವಿ.ಎಸ್‌.ಎಸ್‌.ಎನ್ ಅಧ್ಯಕ್ಷ ಲಲೀತೇಶ್, ಗಂಗವಾರ ಮುನಿರಾಜು, ಶಾಲೆಯ ಶಿಕ್ಷಕರಾದ ದೀಕ್ಷಾ, ರೇಣುಕಾ, ಸಂತೋಷ್, ಶಿವಕುಮಾರ್, ಪದ್ಮಜಾ, ಪಣಿಕ್ಕರ್, ಕಲ್ಪನ, ಜಯಶ್ರಿ, ನೀಲಮ್ಮ, ಸೀಮಾ ರೋಹಿ, ರೂಪ, ಮಂಜುಳ, ಬಿಎಂಟಿಸಿ ಶಿವಣ್ಣ, ಪೋಷಕರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು