ಬುಧವಾರ, ಏಪ್ರಿಲ್ 8, 2020
19 °C
ತಾಲ್ಲೂಕು ಕಚೇರಿಯಲ್ಲಿ 393ನೇ ಜಯಂತಿ

ಅಪ್ರತಿಮ ಹೋರಾಟಗಾರ ಶಿವಾಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಛತ್ರಪತಿ ಶಿವಾಜಿ ಮಹಾರಾಜರ 393ನೇ ಜಯಂತಿ ಕಾರ್ಯಕ್ರಮ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಆಚರಿಸಲಾಯಿತು.

ಡಿವೈಎಸ್‍ಪಿ ಟಿ.ರಂಗಪ್ಪ ಮಾತನಾಡಿ, ‘ಕ್ಷತ್ರಿಯರ ಅಭಿಮಾನದ ಸಂಕೇತವಾಗಿದ್ದ ಶಿವಾಜಿಗೆ ಆತನ ಸಾಮ್ರಾಜ್ಯದ ಕೇಂದ್ರ ಸ್ಥಾನವಾದ ರಾಯಘಡದಲ್ಲಿ ಛತ್ರಪತಿ ಕಿರೀಟ ತೊಡಿಸಿ ಕ್ಷತ್ರಿಯ ಕುಲದ ಸಿಂಹಾಸನಾಧೀಶ್ವರ ಛತ್ರಪತಿ ಶಿವಾಜಿ ಮಹಾರಾಜ ಎಂಬ ಬಿರುದು ನೀಡಲಾಯಿತು. ಹೋರಾಟದ ಹೆಸರಿಗೆ ಅನ್ವರ್ಥರಾಗಿದ್ದ ಚಕ್ರವರ್ತಿ ಶಿವಾಜಿ ದಕ್ಷಿಣ ಭಾಗಕ್ಕೆಲ್ಲ ತನ್ನ ಸಾಮ್ರಾಜ್ಯ ವಿಸ್ತರಿಸಿದ ಅಪ್ರತಿಮ ವೀರ’ ಎಂದರು.

ವಿರೋಧಿಗಳನ್ನು ಲೆಕ್ಕಿಸದೇ ಧೈರ್ಯ ಸಾಹಸ ಮೆರೆದ ಶಿವಾಜಿ ಸಂಸ್ಕೃತಿಯ ಪ್ರತೀಕ‌. ದೇಶದ ಅಖಂಡತೆಯನ್ನು ಎತ್ತಿ ಹಿಡಿದ ಶೂರ ಶಿವಾಜಿ, ಬಾಲ್ಯದಿಂದಲೂ ರೂಢಿಸಿಕೊಂಡು ಬಂದ ಸದ್ಗುಣಗಳು, ಆತ ಹೊಂದಿದ್ದ ಕೆಚ್ಚೆದೆ, ಧೈರ್ಯ, ಸಾಹಸ ಹಾಗೂ ಹೋರಾಟದ ಗುಣಗಳನ್ನು ಇಂದಿನ ನಮ್ಮ ಯುವ ಜನಾಂಗ ತಿಳಿದು, ಜೀವನದಲ್ಲಿ ರೂಢಿಸಿಕೊಳ್ಳುವುದು ಅಗತ್ಯ’ ಎಂದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕ್ಷತ್ರಿಯ ಮರಾಠ ಸಮುದಾಯದ ಹಿರಿಯ ಮುಖಂಡರಾದ ಲಕ್ಷ್ಮಣ್‌ರಾವ್ ಮೋಹಿತೆ, ಹನುಮಂತರಾವ್ ಚವ್ಹಾಣ್, ಈಶ್ವರ್ ರಾವ್ ಪವಾರ್ ಅವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕು ಕ್ಷತ್ರಿಯ ಮರಾಠ ಸಂಘಕ್ಕೆ ನಿವೇಶನ ಮಂಜೂರು ಮಾಡುವಂತೆ ಶಾಸಕರಿಗೆ ಸಂಘದ ಅಧ್ಯಕ್ಷ ಎಸ್.ಸುರೇಶ್‌ ರಾವ್‌ ಮಾನೆ ಹಾಗೂ ಪದಾಧಿಕಾರಿಗಳು ತಹಶೀಲ್ದಾರ್‌ ಟಿ.ಎಸ್. ಶಿವರಾಜ್‌ ಅವರಿಗೆ ಮನವಿ ಸಲ್ಲಿಸಿದರು.

ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಎಚ್.ಕೆ.ಸೋಮಶೇಖರ್, ಕನ್ನಡ ಪಕ್ಷದ ತಾಲ್ಲೂಕು ಅಧ್ಯಕ್ಷ ಸಂಜೀವ್ ನಾಯಕ್, ತಾಲ್ಲೂಕು ಕ್ಷತ್ರಿಯ ಮರಾಠ ಸಂಘದ ಅಧ್ಯಕ್ಷ ಸುರೇಶ್‌ ರಾವ್ ಮಾನೆ, ಪ್ರಧಾನ ಕಾರ್ಯದರ್ಶಿ ದಯಾನಂದರಾವ್ ಯಾದವ್, ಖಜಾಂಚಿ ವಿಠಲ್ ರಾವ್ ಮಾನೆ ಮುಖಂಡರಾದ ಎಚ್.ಪ್ರಕಾಶ್‌ರಾವ್, ಮಹದೇವರಾವ್ ಪವಾರ್, ಪುನೀತ್‌ರಾವ್ ಸಾಳಂಕೆ, ಶಿವಾಜಿರಾವ್‌ಪವರ್, ಮಂಜುನಾಥರಾವ್, ಭುಜಂಗರಾವ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)