ಶ್ರಾವಣ ಪ್ರಾರಂಭ ತಿರುಪತಿಗೆ ಪಾದಯಾತ್ರೆ

7

ಶ್ರಾವಣ ಪ್ರಾರಂಭ ತಿರುಪತಿಗೆ ಪಾದಯಾತ್ರೆ

Published:
Updated:
Deccan Herald

ವಿಜಯಪುರ: ಶ್ರಾವಣ ಶನಿವಾರದ ಅಂಗವಾಗಿ ದೊಡ್ಡಬಳ್ಳಾಪುರದಿಂದ ತಿರುಪತಿಗೆ ನೂರಾರು ಮಂದಿ ಪಾದಯಾತ್ರೆ ನಡೆಸಿದರು.

ಇಲ್ಲಿನ ದೇವನಹಳ್ಳಿ ರಸ್ತೆಯಲ್ಲಿರುವ ವಿ.ಎಸ್.ಆರ್ ಕನ್ವೆನ್ಶನ್ ಹಾಲ್ ನಲ್ಲಿ ತಂಗಿದ್ದ ಪಾದಯಾತ್ರಿಗಳಿಗೆ ಸ್ಥಳೀಯರು ಉಪಚರಿಸಿದರು.

ಪಾದಯಾತ್ರೆ ಕೈಗೊಂಡಿದ್ದ ವಿ.ಎಸ್.ಆರ್.ರಮೇಶ್ ಮಾತನಾಡಿ, ‘ಶ್ರಾವಣ ಮಾಸ ಆರಂಭದಲ್ಲಿ ಪ್ರತಿ ವರ್ಷ ನಾವು ತಿರುಪತಿಗೆ ಪಾದಯಾತ್ರೆ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದೇವೆ’ ಎಂದು ತಿಳಿಸಿದರು.

ದೇವರ ಕಾರ್ಯದಿಂದ ಮಾನಸಿಕ ನೆಮ್ಮದಿ ದೊರೆಯುವುದರ ಜೊತೆಗೆ ಹಳ್ಳಿಗಳಲ್ಲಿನ ಜನರನ್ನು ಧಾರ್ಮಿಕ ಕಾರ್ಯಗಳತ್ತ ಸೆಳೆಯಲು ಸಹಕಾರಿಯಾಗಲಿದೆ. ಇತ್ತೀಚೆಗೆ ಯುವಜನರು ಧಾರ್ಮಿಕ ಕಾರ್ಯಗಳಿಂದ ವಿಮುಖರಾಗುತ್ತಿದ್ದಾರೆ. ಆದ್ದರಿಂದ ಅವರನ್ನು ಜಾಗೃತರನ್ನಾಗಿ ಮಾಡುವ ಸಲುವಾಗಿ ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ ಎಂದರು.

ಗುರುಪ್ರಸಾದ್, ಕೆಂಪಣ್ಣ, ಶ್ರೀನಿವಾಸ್, ಪದ್ಮ ಇದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !