ವಾಹನ ದಟ್ಟಣೆ: ವ್ಯಾಪಾರಿಗಳ ಸ್ಥಳಾಂತರ

7
Web_21_BngRRL

ವಾಹನ ದಟ್ಟಣೆ: ವ್ಯಾಪಾರಿಗಳ ಸ್ಥಳಾಂತರ

Published:
Updated:
ಎಪಿಎಂಸಿ ಯಾರ್ಡ್‌ನಲ್ಲಿ ಹೂವಿನ ವ್ಯಾಪಾರಿಗಳಿಗೆ ಸ್ಥಳ ನಿಗದಿಪಡಿಸಲಾಯಿತು

ದೊಡ್ಡಬಳ್ಳಾಪುರ: ನಗರದ ಡಿ.ಕ್ರಾಸ್ ವೃತ್ತದಲ್ಲಿ ಉಂಟಾಗುತ್ತಿದ್ದ ಸಂಚಾರ ದಟ್ಟಣೆಯನ್ನು ತಡೆಯಲು ಹೂವಿನ ಮಾರಾಟಗಾರರಿಗೆ ಎಪಿಎಂಸಿ ಯಾರ್ಡ್‌ನಲ್ಲಿ ಪ್ರತ್ಯೇಕ ಸ್ಥಳವನ್ನು ನೀಡಲಾಗಿದೆ. ವ್ಯಾಪಾರಸ್ಥರು ಇಲ್ಲಿಯೇ ವ್ಯಾಪಾರ ನಡೆಸಬೇಕು ಎಂದು ನಗರ ಪೊಲೀಸ್ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ಬಿ.ಕೆ.ಪಾಟೀಲ್ ಹೇಳಿದರು.

ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಬುಧವಾರ ಹೂವಿನ ವ್ಯಾಪಾರಸ್ಥರಿಗೆ ಸ್ಥಳವನ್ನು ಗುರುತಿಸಿಕೊಟ್ಟ ಅವರು, ಕೆಲವು ಪ್ರಮುಖ ರಸ್ತೆಗಳ ಬದಿಯಲ್ಲಿ ಹೂವಿನ ವ್ಯಾಪಾರಸ್ಥರು ವಹಿವಾಟು ಮಾಡುತ್ತಿದ್ದರು. ಇದರಿಂದಾಗಿ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿತ್ತು. ನಗರದ ಡಿ.ಕ್ರಾಸ್ ವೃತ್ತದಲ್ಲಿ ಹೂವಿನ ಮಾರಾಟಗಾರರು ವೃತ್ತದ ಬದಿಗಳಲ್ಲಿ ವಹಿವಾಟು ನಡೆಸುತ್ತಿದ್ದರು ಎಂದರು.

ದೇವನಹಳ್ಳಿ, ಹಿಂದೂಪುರ, ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಸೇರಿದಂತೆ ಪ್ರಮುಖ ಸ್ಥಳಗಳಿಗೆ ಹೋಗುವ ಬಸ್‌ಗಳು ಇದೇ ವೃತ್ತದ ಮೂಲಕ ಬರುತ್ತಿದ್ದ ಕಾರಣ ಸಂಚಾರಕ್ಕೆ ಸಾಕಷ್ಟು ಸಮಸ್ಯೆ ಎದುರಾಗುತಿತ್ತು. ಸದ್ಯ ಹೂವಿನ ಮಾರಾಟಗಾರರಿಗೆ ಆರ್‌ಎಂಸಿ ಯಾರ್ಡ್‌ನಲ್ಲಿ ಪ್ರತ್ಯೇಕ ಸ್ಥಳವನ್ನು ಒದಗಿಸಲಾಗಿದ್ದು ವ್ಯಾಪಾರಸ್ಥರು ಸಹಕರಿಸಬೇಕಾಗಿ ತಿಳಿಸಿದರು.

ಮಾರುಕಟ್ಟೆಯ ಸಹಾಯಕ ನಿರ್ದೇಶಕ ನಾಗರಾಜ್ ಮಾತನಾಡಿ, ಆರ್‌ಎಂಸಿ ಯಾರ್ಡ್‌ನಲ್ಲಿ ಈ ಹಿಂದೆ ವ್ಯಾಪಾರ ವಹಿವಾಟು ಮಾಡುತ್ತಿದ್ದವರಿಗೆ ಸದ್ಯದಲ್ಲೇ ನೂತನ ಯಾರ್ಡ್ ಸಿದ್ಧವಾಗಲಿದೆ. ಮಾರಾಟಗಾರರು ನಿಗದಿತ ಸ್ಥಳದಲ್ಲಿ ಅವರ ವಹಿವಾಟುಗಳನ್ನು ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ನಗರದ ರಸ್ತೆ ಬದಿಯಲ್ಲಿ, ಡಿ.ಕ್ರಾಸ್ ವೃತ್ತದಲ್ಲಿ ವ್ಯಾಪಾರ ಮಾಡುವ ಮೂಲಕ ವಾಹನಗಳ ಸಂಚಾರಕ್ಕೆ ಸಮಸ್ಯೆ ತಂದೊಡ್ಡಬಾರದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !