ಭಾನುವಾರ, ಜುಲೈ 25, 2021
25 °C
ವಿಶ್ವ ಪರಿಸರ ದಿನಾಚರಣೆ: ನರೇಗಾ ಅಡಿ ಕಾರ್ಯಕ್ರಮ

ಬೆಟ್ಟ ಅರಣ್ಯೀಕರಣಕ್ಕೆ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೂಲಿಬೆಲೆ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ, ಗ್ರಾಮ ಪಂಚಾಯಿತಿ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯ ಸಹಯೋಗದಲ್ಲಿ ಕೆಲವು ವರ್ಷಗಳ ಹಿಂದೆ ಸೂಲಿಬೆಲೆಯ ಸರ್ಕಾರಿ ಶಾಲಾ ಕಾಲೇಜು ಹಾಗೂ ಸ್ಮಶಾನ ಮತ್ತಿತರ ಕಡೆಗಳಲ್ಲಿ ನೆಟ್ಟಿದ ಸಸಿಗಳು ಬೆಳೆದು ಮರ ಬೆಳೆಸುವ ಯೋಜನೆಗಳು ಫಲ ನೀಡಿವೆ.

ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆಯಿಂದ ರೂಪುಗೊಂಡ ಯೋಜನೆಗಳು ಆಶಾದಾಯಕವಾಗಿರುವ ಹಿನ್ನೆಲೆಯಲ್ಲಿ ಕಳೆದ ವಾರ ಇಂಜನಹಳ್ಳಿ ಗ್ರಾಮದ ಬರಡು ಬೆಟ್ಟದ ಮೇಲೆ ಸಸಿಗಳನ್ನು ನೆಟ್ಟು ಅರಣ್ಯ ನಿರ್ಮಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ.

ಶುಕ್ರವಾರ ಪರಿಸರ ದಿನಾಚರಣೆ ಪ್ರಯುಕ್ತ ನೇರಳೆ, ಹುಣಸೆ, ಶಿವಾನಿ, ಸಿಲ್ವರ್ ಸೇರಿದಂತೆ ಮತ್ತಿತರ ಜಾತಿಯ 1,500 ಸಸಿಗಳನ್ನು ನೆಡುವ ಮೂಲಕ ಇಂಜನಹಳ್ಳಿ ಬೆಟ್ಟದ ಅರಣ್ಯೀಕರಣವನ್ನು ಒರೋಹಳ್ಳಿ ಗ್ರಾಮ ಪಂಚಾಯಿತಿ ನರೇಗಾ ಯೋಜನೆ, ಸಾಮಾಜಿಕ ಅರಣ್ಯ ಇಲಾಖೆ ಹೊಸಕೋಟೆ, ಮೈರಾಡ್ ಸಂಸ್ಥೆ ಹಾಗೂ ರೋಟರಿ ಬೆಂಗಳೂರು ಕಂಟೋನ್ಮೆಂಟ್, ಡಿಜಿಟೇ ಇನ್ಫೋಟೆಕ್ ಪ್ರೈವೇಟ್(ಲಿ) ಸಹಯೋಗದಲ್ಲಿ ರೂಪಿಸಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕನಿಷ್ಠ 100 ಸಸಿ ನೆಡುವುದು ಸೇರಿ ತಾಲ್ಲೂಕಿನಲ್ಲಿ ಒಟ್ಟು 1 ಲಕ್ಷ ಸಸಿ ನೆಡುವ ಯೋಜನೆಯಿದೆ ಎಂದು ಹೊಸಕೋಟೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಾಥ್ ಗೌಡ ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.