ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಮೌಳೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ

Last Updated 15 ನವೆಂಬರ್ 2017, 5:45 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ನಗರದ ತೇರಿನ ಬೀದಿಯಲ್ಲಿ ಶ್ರೀಪ್ರಸನ್ನ ಚಂದ್ರಮೌಳೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು. ಮುಜರಾಯಿ ಇಲಾಖೆ ಹಾಗೂ ದೇವಾಲಯದ ಭಕ್ತ ಮಂಡಲಿ ವತಿಯಿಂದ ತಾಲ್ಲೂಕು ತಹಶೀಲ್ದಾರರ ಉಸ್ತುವಾರಿಯಲ್ಲಿ ನಡೆದ ಬ್ರಹ್ಮ ರಥೋತ್ಸವದಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತರು ರಥಕ್ಕೆ ಬಾಳೆಹಣ್ಣು, ದವನ ಅರ್ಪಿಸಿ ಧನ್ಯತಾ ಭಾವ ಮೆರೆದರು.

ಬ್ರಹ್ಮ ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ಗಿರಿಜಾ ಕಲ್ಯಾಣೋತ್ಸವ ನಡೆಯಿತು.5 ಅಡಿಯ ಕಲ್ಲಿನ ಚಕ್ರಗಳ ಮೇಲೆ, ಐದು ಅಂತಸ್ತುಗಳ ಶಿವನ ವಿವಿಧ ರೂಪ, ಅವತಾರಗಳನ್ನು ಹೊಂದಿರುವ ಚಿತ್ರಪಟಗಳು ಹಾಗೂ ತಳಿರು ತೋರಣಗಳಿಂದ ರಥವನ್ನು ಸಿಂಗರಿಸಲಾಗಿತ್ತು. ದೇವಾಲಯದಲ್ಲಿ ಗಿರಿಜಾ ಕಲ್ಯಾಣೋತ್ಸವ ಸ್ವಾಮಿಗೆ ವಿಶೇಷ ಅಲಂಕಾರ ಯಾಗ, ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

ಶ್ರೀಕಂಠೇಶ್ವರ ಭಕ್ತ ಮಂಡಲಿ, ನಂಜುಂಡೇಶ್ವರ ಸೇವಾ ಸಮಿತಿ ಸೇರಿದಂತೆ ವಿವಿಧ ಅರವಂಟಿಗೆ ಸಮಿತಿಗಳಿಂದ ಜಾತ್ರೆಗೆ ಆಗಮಿಸಿದ್ದ ಭಕ್ತಾದಿಗಳಿಗೆ ಅರವಂಟಿಗೆ ಹಾಗೂ ಪ್ರಸಾದ ವಿನಿಯೋಗ ನಡೆಯಿತು. ನ.14 ರಂದು ಹಗಲು ಪರಿಷೆ ಹಾಗೂ ರಾತ್ರಿ ಅಶ್ವವಾಹನೋತ್ಸವ(ವೀರಭದ್ರನ ಕುಣಿತ) ಕಾರ್ಯಕ್ರಮಗಳಿವೆ.

ಅನಾದಿಕಾಲದಿಂದ ದೇವಾಲಯದಲ್ಲಿ ಬ್ರಹ್ಮ ರಥೋತ್ಸವ ಸಣ್ಣ ರಥದಲ್ಲಿ ನಡೆಯುತ್ತಿತ್ತು. 10 ವರ್ಷಗಳಿಂದೀಚೆಗೆ ನಿರ್ಮಾಣವಾಗಿರುವ ಐದು ಅಡಿ ಎತ್ತರದ ಕಲ್ಲಿನ ರಥಗಳ ಮೇಲೆ 5 ಅಂತಸ್ತಿನ ಭವ್ಯ ತೇರು ನೋಡಲು ಮನೋಹರವಾಗಿದೆ. ಇದರೊಂದಿಗೆ ಶಿವನ ವಿವಿಧ ಭಂಗಿಗಳ ಸುಂದರ ಚಿತ್ರಪಟಗಳು ಗಮನ ಸೆಳೆಯುತ್ತವೆ.

ಸುಮಾರು ಅರ್ಧ ಕಿ.ಮೀ ದೂರ ಈ ರಥವನ್ನು ಎಳೆದು ರಥೋತ್ಸವದಲ್ಲಿ ಭಕ್ತಾದಿಗಳು ಶ್ರದ್ಧಾ ಭಕ್ತಿಗಳಿಂದ ಭಾಗವಹಿಸುತ್ತಿದ್ದಾರೆ. ಪ್ರತಿವರ್ಷದ ಕಾರ್ತಿಕ ಕಡೆಯ ಸೋಮವಾರದಂದು ಮುಜರಾಯಿ ಇಲಾಖೆಯ ವತಿಯಿಂದ ದೇವಾಲಯದ ಭಕ್ತ ಮಂಡಲಿ ಸಹಯೋಗದೊಂದಿಗೆ ರಥೋತ್ಸವವನ್ನು ನಡೆಸಿಕೊಂಡು ಬರಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT