ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹47.5 ಲಕ್ಷ ವೆಚ್ಚದ ಬಸ್‌ ಡಿಪೊ ಕಾಂಪೌಂಡ್‌

₹ 50 ಲಕ್ಷ ವೆಚ್ಚದಲ್ಲಿ ಉರ್ದು ಶಾಲೆಗೆ ನೂತನ ಕೊಠಡಿಗಳ ನಿರ್ಮಾಣಕ್ಕೆ ಶಾಸಕರಿಂದ ಚಾಲನೆ
Last Updated 15 ಡಿಸೆಂಬರ್ 2018, 12:40 IST
ಅಕ್ಷರ ಗಾತ್ರ

ವಿಜಯಪುರ: ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಿ ಕೆಲಸ ಮಾಡುತ್ತಿದ್ದ ನಾಗರಿಕರ ಸಹಕಾರ ಹೆಚ್ಚಿನ ಪ್ರಮಾಣದಲ್ಲಿ ಅವಶ್ಯವಾಗಿದೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ದೇವನಹಳ್ಳಿ ರಸ್ತೆಯಲ್ಲಿ ₹ 47.5 ಲಕ್ಷಗಳ ವೆಚ್ಚದಲ್ಲಿ ಸಾರಿಗೆ ಬಸ್ ಡಿಪೊ ಕಾಂಪೌಂಡ್ ನಿರ್ಮಾಣಕ್ಕೆ ಗುದ್ದಲಿಪೂಜೆ ಹಾಗೂ ಉರ್ದು ಶಾಲೆಯ ಆವರಣದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಬಿಡುಗಡೆಯಾಗಿರುವ ₹ 50 ಲಕ್ಷ ವೆಚ್ಚದಲ್ಲಿ ನೂತನ ಕೊಠಡಿಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಿ ಅವರು ಮಾತನಾಡಿದರು.

‘ನನೆಗುದಿಗೆ ಬಿದ್ದಿದ್ದ ಡಿಪೊ ಕಾಮಗಾರಿಗೆ ಚಾಲನೆ ನೀಡುತ್ತಿದ್ದೇವೆ. ಹಿಂದೆ ಚಾಲನೆ ನೀಡಿದ್ದರೂ ಮೀಸಲಿಟ್ಟಿರುವ ಅನುದಾನ ಸಾಕಾಗುತ್ತಿಲ್ಲ ಎನ್ನುವ ಕಾರಣಕ್ಕೆ ಕಾಮಗಾರಿ ನಿಂತುಹೋಗಿತ್ತು. ಈಗ ಅನುದಾನ ಬಿಡುಗಡೆ ಮಾಡಿಸಿದ್ದು, ಕಾಂಪೌಂಡ್ ನಿರ್ಮಾಣವಾದ ಕೂಡಲೇ ಸಾರಿಗೆ ಸಚಿವರೊಂದಿಗೆ ಚರ್ಚೆ ನಡೆಸಿ ಇದರ ನಿರ್ಮಾಣಕ್ಕೂ ಚಾಲನೆ ನೀಡುತ್ತೇವೆ’ ಎಂದರು.

‘ಹಿಂದೆ ಕ್ಷೇತ್ರದಲ್ಲಿ ಶಾಸಕರು ಇರುವ ಪಕ್ಷದ ಸರ್ಕಾರವಿರುತ್ತಿರಲಿಲ್ಲ, ಈಗ ನಮ್ಮ ಪಕ್ಷದವರೇ ಮುಖ್ಯಮಂತ್ರಿಯಾಗಿರುವುದರಿಂದ ಅನುದಾನಗಳು ತರಲಿಕ್ಕೆ ಸಮಸ್ಯೆ ಇಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಜನರ ಸಹಕಾರ ಬೇಕಷ್ಟೇ, ಯಾವುದೇ ಅನುಮಾನಗಳು ಬೇಡ, ಹೆಚ್ಚಿನ ಅನುದಾನಗಳು ತಂದು ಅಭಿವೃದ್ಧಿ ಮಾಡುತ್ತೇವೆ’ ಎಂದರು.

ಕಸ ವಿಲೇವಾರಿ ಘಟಕ :‘ಇಲ್ಲಿ ಉತ್ಪತ್ತಿಯಾಗುತ್ತಿರುವ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಸ್ಥಳಾವಕಾಶದ ಕೊರತೆ ಇದೆ. ಜಿಲ್ಲಾಧಿಕಾರಿಯೊಂದಿಗೆ ಚರ್ಚೆ ಮಾಡಿದ್ದೇನೆ. ಅವರ ನೇತೃತ್ವದಲ್ಲಿ ಭೂಮಿ ಖರೀದಿ ಮಾಡಿಕೊಂಡು ಕಸದ ಸಮಸ್ಯೆಯನ್ನು ನೀಗಿಸುತ್ತೇವೆ’ ಎಂದರು.

ಬೆಂಬಲಿಸುವಂತೆ ಮನವಿ : ‘ನಾನು ಶಾಸಕನಾಗಿ ಬಂದ ಮೇಲೆ ವಿಜಯಪುರಕ್ಕೆ ಸಾಕಷ್ಟು ಅಭಿವೃದ್ಧಿ ಕೆಲಸಕ್ಕೆ ಅನುದಾನ ತಂದಿದ್ದೇವೆ. ಮುಂದೆಯೂ ಮಾಡ್ತೇನೆ, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ಕಸದ ಸಮಸ್ಯೆ, ಸೇರಿದಂತೆ ಇಲ್ಲಿನ ಜ್ವಲಂತ ಸಮಸ್ಯೆಗಳ ನಿವಾರಣೆಗಾಗಿ ಶ್ರಮಿಸುತ್ತಿದ್ದೇನೆ. ಮುಂಬರುವ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಮಾಡಿಕೊಡಿ’ ಎಂದು ಜನರ ಬಳಿ ಮನವಿ ಮಾಡಿದರು.

ಅನುದಾನ: ‘ಬಾಲಕಿಯರ ಪ್ರೌಢಶಾಲೆಗೆ ಕಾಂಪೌಂಡ್ ಇಲ್ಲದೆ ಸಮಸ್ಯೆಗಳು ಉಂಟಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ₹ 5 ಲಕ್ಷ ವೆಚ್ಚದಲ್ಲಿ ಇದನ್ನು ನಿರ್ಮಾಣ ಮಾಡಲಾಗುತ್ತಿದೆ. ಪೊಲೀಸರು ಗಮನಹರಿಸುವಂತೆ ಸೂಚಿಸಿದ್ದೇನೆ’ ಎಂದರು.

ಪುರಸಭಾ ಮುಖ್ಯಾಧಿಕಾರಿ ಎ.ಎಚ್. ನಾಗರಾಜ್, ಸದಸ್ಯರಾದ ಎಸ್.ಭಾಸ್ಕರ್, ಕೇಶವಪ್ಪ, ಜೆಡಿಎಸ್ ಹೋಬಳಿ ಘಟಕದ ಅಧ್ಯಕ್ಷ ಎಂ. ವೀರಪ್ಪ, ಪ್ರಧಾನ ಕಾರ್ಯದರ್ಶಿ ಕಲ್ಯಾಣ್ ಕುಮಾರ್ ಬಾಬು, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಮುನಿರಾಜು, ಕಾರಹಳ್ಳಿ ಮುನೇಗೌಡ, ಎಸ್.ಆರ್.ಎಸ್ ಬಸವರಾಜ್, ಸುಬ್ಬಣ್ಣ, ಜೆ.ಆರ್.ಮುನಿವೀರಣ್ಣ, ದಂಡಿಗಾನಹಳ್ಳಿ ನಾರಾಯಣಸ್ವಾಮಿ, ಕಗ್ಗಲಹಳ್ಳಿ ಗುರಪ್ಪ, ಎಚ್.ಎಂ.ಕೃಷ್ಣಪ್ಪ, ವೆಂಕಟಗಿರಿಕೋಟೆ ಈರಪ್ಪ, ಸದಾಶಿವಯ್ಯ.ಕೆ, ಹರ್ಷವರ್ಧನ್, ಚಿಕ್ಕಬಚ್ಚೇಗೌಡ, ಜಿ.ಎಂ.ಹಳ್ಳಿ ಸುರೇಶ್, ಎಇಇ ರುದ್ರಪ್ರಸಾದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT