ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಗಳಿ ಪಿಕೆಪಿಎಸ್: ₹ 12 ಲಕ್ಷ ಲಾಭ

Last Updated 17 ಡಿಸೆಂಬರ್ 2020, 12:01 IST
ಅಕ್ಷರ ಗಾತ್ರ

ಐಗಳಿ: ‘ಕೊರೊನಾ ಹಾವಳಿಯಿಂದಾಗಿ ರಸಗೊಬ್ಬರ ಉತ್ಪನ್ನ ತಯಾರಿಕೆಯಲ್ಲಿ ವಿಳಂಬವಾಗಿದೆ. ಆದ್ದರಿಂದ ರಾಜ್ಯದಲ್ಲಿ ಗೊಬ್ಬರ ಕೊರತೆ ಉಂಟಾಗಿ ರೈತರಿಗೆ ತೊಂದರೆಯಾಗಿದೆ. ಸಂಘವು ಈ ಸಾಲಿನಲ್ಲಿ ರೈತರ ಬೇಡಿಕೆ ಪೂರೈಸಲಿದೆ’ ಎಂದು ಇಲ್ಲಿನ ಬಸವೇಶ್ವರ ಪಿ.ಕೆ.ಪಿ.ಎಸ್.ನ ಸದಸ್ಯ ಸಿ.ಎಸ್. ನೇಮಗೌಡ ಹೇಳಿದರು.

ಸಂಘದ 2019–20ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದರು.

‘ಸಂಘ ಬೆಳವಣಿಗೆಯಲ್ಲಿದೆ. ಸಾಲ ಪಡೆದವರು ಸದ್ಬಳಕೆ ಮಾಡಿಕೊಂಡು ಮರುಪಾವತಿಸಿದರೆ ಮತ್ತಷ್ಟು ಬೆಳೆಯಬಹುದು’ ಎಂದರು.

ಮುಖ್ಯ ಕಾರ್ಯನಿರ್ವಾಹಕ ಚಂದ್ರಕಾಂತ ಪಾಟೀಲ, ‘2019–20ನೇ ಸಾಲಿನಲ್ಲಿ ₹ 12 ಲಕ್ಷ ಲಾಭವಾಗಿದೆ. ಮುಂದಿನ ಹಂಗಾಮಿನಲ್ಲಿ ರೈತರಿಗೆ ಗೊಬ್ಬರ ಪೂರೈಸಲಾಗುವುದು’ ಎಂದು ತಿಳಿಸಿದರು.

ಅಧ್ಯಕ್ಷ ಎಂ.ಬಿ. ನೇಮಗೌಡ, ಅಪ್ಪಾಸಾಬ ಭೀ.ತೆಲಸಂಗ, ನಿರ್ದೇಶಕ ಅಪ್ಪಾರಾಯ ಡಂಬಳಿ, ಸಂಗಪ್ಪ ಬಿರಾದಾರ, ಬಸಪ್ಪ ಚಮಕೇರಿ, ಬಾಬಾಸಾಬ ಸಾವಂತ, ಚನ್ನಪ್ಪ ಕಾಗವಾಡ, ಸೈದಪ್ಪ ಕಾಂಬಳೆ, ನಿರ್ದೇಶಕಿ ಶೀಲಾ ಮಾಕಾಣಿ, ಮತ್ತು ಮಹಾದೇವಿ ಪಾಟೀಲ, ಹಣಮಂತ ಮಿರ್ಜಿ, ಶಿವಾನಂದ ಸಿಂದೂರ, ಸಿದ್ದಪ್ಪ ಬಳ್ಳೋಳ್ಳಿ, ರವಿ ಹಾಲಳ್ಳಿ, ಆರ್.ಆರ್. ತೆಲಸಂಗ ಇದ್ದರು.

ಸದಾಶಿವ ಪಡಸಲಗಿ ಸ್ವಾಗತಿಸಿದರು. ಸಲೀಮ್ ಮುಜಾವರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT