ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಪನೆಗಳಿಗೆ ‘ಬಣ್ಣ’ ತುಂಬಿದ ಮಕ್ಕಳು

ಪ್ರಜಾವಾಣಿ–ಡೆಕ್ಕನ್ ಹೆರಾಲ್ಡ್‌ ಸಹಯೋಗ
Last Updated 14 ನವೆಂಬರ್ 2019, 16:05 IST
ಅಕ್ಷರ ಗಾತ್ರ

ಅಥಣಿ: ‘ಮಕ್ಕಳು ಪ್ರಸ್ತುತ ಸಮಾಜದಲ್ಲಿ ನಮ್ಮ ನಡುವೆ ಇರುವ ಉತ್ತಮರನ್ನು ಆದರ್ಶವಾಗಿಟ್ಟುಕೊಳ್ಳಬೇಕು. ಆಗ, ಏನಾದರೂ ಸಾಧನೆ ಸಾಧ್ಯವಾಗುತ್ತದೆ’ ಎಂದು ರಾಜ್ಯಮಟ್ಟದಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಎಂ.‍ಪಿ. ಮೇತ್ರಿ ಹೇಳಿದರು.

‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ದಿನಪತ್ರಿಕೆಗಳು, ಇಲ್ಲಿನ ಸಹಾಯ ಪ್ರತಿಷ್ಠಾನ ಮತ್ತು ಚಿಕ್ಕಟ್ಟಿ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಗುರುವಾರ ಚಿಕ್ಕಟ್ಟಿ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಚಿತ್ರಕಲಾ ಸ್ಪರ್ಧೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಐತಿಹಾಸಿಕ ನಾಯಕರ ಬದಲಿಗೆ, ನಮಗೆ ನಾವೇ ಆದರ್ಶವಾಗಬೇಕು’ ಎಂದರು.

ಮುಖ್ಯಅತಿಥಿಯಾಗಿದ್ದ ಭಾರತೀಯ ಕಿಸಾನ್‌ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ ದಾನಗೌಡರ ಮಾತನಾಡಿ, ‘ಯುವಕರು ಸಹಾಯ ಪ್ರತಿಷ್ಠಾನ ಆರಂಭಿಸಿ ಜನಪರ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಅಭಿನಂದನಾರ್ಹ. ಸರ್ಕಾರವು ರೈತರ ಕಡೆಗೆ ತಿರುಗಿ ನೋಡುವಂತಹ ಕಾರ್ಯಕ್ರಮಗಳನ್ನು ಆಯೋಜಿಸಲಿ’ ಎಂದು ಆಶಿಸಿದರು.

ಚಿಕ್ಕಟ್ಟಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸುರೇಶ ಚಿಕ್ಕಟ್ಟಿ ಮಾತನಾಡಿ, ‘ಬಹುತೇಕರು ಗಣಿತ, ವಿಜ್ಞಾನ ಮೊದಲಾದ ವಿಷಯಗಳಿಗೆ ಮಾತ್ರ ಶಿಕ್ಷಕರಾಗಲು ಆಸೆ ಪಡುತ್ತಾರೆ. ಆದರೆ ಚಿತ್ರಕಲಾ ಶಿಕ್ಷಕರಾಗಲು ಹೆಚ್ಚಿನ ಜನರು ಮುಂದೆ ಬರುವುದಿಲ್ಲ. ಎಲ್ಲ ಶಿಕ್ಷಣ ಸಂಸ್ಥೆಯಲ್ಲೂ ಚಿತ್ರಕಲಾ ಶಿಕ್ಷಕನಿಗೆ ಇತರ ಶಿಕ್ಷಕರಷ್ಟೇ ಸಂಬಳ ಸಿಗುತ್ತಿದೆ’ ಎಂದರು.

‘ಮಕ್ಕಳಿಗೆ ಚಿತ್ರಕಲೆಯ ಮಹತ್ವ ತಿಳಿಸಿಕೊಡುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ’ ಎಂದು ಹೇಳಿದರು.

ವಿವಿಧ ಶಾಲೆಗಳ 70 ವಿದ್ಯಾರ್ಥಿಗಳು ಭಾಗವಹಿಸಿದ್ದರು. 10 ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಪ್ರಥಮ ಸ್ಥಾನ ಪಡೆದ ನಾಮದೇವ ಖಾಂಡೆಕರ್ ಹಾಗೂ ಉಜ್ವಲಾ ಸಾಳುಂಕೆ ಅವರಿಗೆ ತಲಾ ₹ 1,500, ದ್ವಿತೀಯ ಸ್ಥಾನ ಗಳಿಸಿದ ಮಲ್ಲಿಕಾ ಗೆಜ್ಜಿ ಹಾಗೂ ಪ್ರದೀಪ ಗುಡಿ ಅವರಿಗೆ ತಲಾ ₹ 1ಸಾವಿರ, 3ನೇ ಸ್ಥಾನ ಪಡೆದ ಬೃಂದಾ ಸಾಳುಂಕೆ ಮತ್ತು ಮಹೇಶ ನಂದಿಕೋಲಮಠ ತಲಾ ₹ 500 ಮತ್ತು ಪ್ರಶಸ್ತಿಪತ್ರ ಪಡೆದರು. ನಾಲ್ವರಿಗೆ ಸಮಾಧಾನಕರ ಬಹುಮಾನ (ತಲಾ ₹ 250) ಕೊಡಲಾಯಿತು.

ಸಹಾಯ ಪ್ರತಿಷ್ಠಾನ ಕಾರ್ಯದರ್ಶಿ ಸಂತೋಷ ಬಡಿಕಂಬಿ, ಸುವರ್ಣ ಕರ್ನಾಟಕ ಜನಸೇವಾ ಸಂಘದ ಅಧ್ಯಕ್ಷ ರವಿ ಪೂಜಾರಿ ಮಾತನಾಡಿದರು.

ಮುಖಂಡರಾದ ಸದಾಶಿವ ಚಿಕ್ಕಟ್ಟಿ, ಶಿವಾನಂದ ಪಾಟೀಲ, ಬಸವರಾಜ ಮಠಪತಿ, ಯಶೋದಾ ಕರೋಲಿ, ದೀಪಾ ಚೋಳ್ಳಿ, ಚಂದ್ರು ರೋಕಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT