ಬೆಳಗಾವಿ: ಬಸವ ಜಯಂತಿ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬಾಗಲಕೋಟೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕೂಡಲ ಸಂಗಮ ಅಭಿವೃದ್ಧಿ ಪ್ರಾಧಿಕಾರದ ಆಶ್ರಯದಲ್ಲಿ ರಾಜ್ಯದಾದ್ಯಂತ ಸಂಚಾರ ಆಂಭಿಸಿರುವ ‘ಅನುಭವ ಮಂಟಪ– ಶರಣರ ವೈಭವ ರಥಯಾತ್ರೆ’ಯು ಭಾನುವಾರ ಬೆಳಗಾವಿಗೆ ಆಗಮಿಸಿತು. ಬಸವಣ್ಣನವರ ಜೀವನ, ಬೋಧನೆ, ವಚನ ಸಾರವನ್ನು ನವಪೀಳಿಗೆಗೆ ಪರಿಚಯಿಸುವ ದೃಷ್ಟಿಯಿಂದ ಈ ಆಕರ್ಷಕ ರಥಯಾತ್ರೆ ಆರಂಭಿಸಲಾಗಿದೆ.

ಅತ್ಯಾಕರ್ಷಕ ಪ್ರತಿಮೆ, ಮಾದರಿಗಳನ್ನು ಹೊತ್ತು ಬಂದ ವಾಹನವನ್ನು ಜನ ಆಸಕ್ತಿಯಿಂದ ವೀಕ್ಷಿಸಿದರು. ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ರಥಯಾತ್ರೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ ಪೂಜೆ ಸಲ್ಲಿಸಿ ಬರಮಾಡಿಕೊಂಡರು. ಮೇಯರ್ ಮಂಗೇಶ ಪವಾರ, ಉಪಮೇಯರ್ ವಾಣಿ ಜೋಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ ಇದ್ದರು.

ಏನೇನಿದೆ ಈ ರಥದಲ್ಲಿ: ಅನುಭವ ಮಂಟಪ ಮಾದರಿ ರಥದಲ್ಲಿ ಜಗಜ್ಯೋತಿ ಬಸವೇಶ್ವರ, ಭಗವಾನ್ ಬುದ್ಧ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್, ಶಿವಶರಣೆ ಅಕ್ಕ ಮಹಾದೇವಿ, ಸಂತ ಶಿಶುನಾಳ ಶರೀಫ, ಗುರುನಾನಕ, ಭಗವಾನ್ ಮಹಾವೀರ, ನಾರಾಯಣ ಗುರು, ಯೇಸುಕ್ರಿಸ್ತರ ಪ್ರತಿಮೆಗಳನ್ನೊಳಗೊಂಡಿದೆ. ಇಡೀ ರಥವನ್ನು ಸರ್ವಧರ್ಮಗಳ ಅನುಭವ ಮಂಟಪದಂತೆ ನಿರ್ಮಿಸಲಾಗಿದೆ.

ಏ. 29 ಹಾಗೂ 30ರವರೆಗೆ ಕೂಡಲಸಂಗಮದಲ್ಲಿ ಆಯೋಜಿಸಿರುವ ಬಸವ ಜಯಂತಿ ಅಂಗವಾಗಿ ಅನುಭವ ಮಂಟಪ– ಬಸವಾದಿ ಶರಣರ ವೈಭವ ಕಾರ್ಯಕ್ರಮದ ಭಾಗವಾಗಿ ಈ ರಥಯಾತ್ರೆ ರಾಜ್ಯದಾದ್ಯಂತ ಸಂಚರಿಸುತ್ತಿದೆ.

ವಿವಿಧ ಲಿಂಗಾಯತ ಸಂಘಟನೆಗಳ ನಾಯಕರೂ ಇದ್ದರು. ಹುಣಶಿಕೊಳ್ಳ ಮಠದ ಸಿದ್ಧಬಸವದೇವರು, ಮುಖಂಡರಾದ ಶಂಕರ ಗುಡಸ, ರತ್ನಪ್ರಭಾ ಬೆಲ್ಲದ, ಮಲಗೌಡ ಪಾಟೀಲ, ಬಸವರಾಜ ರೊಟ್ಟಿ, ಅಶೋಕ ಬೆಂಡಿಗೇರಿ, ಈರಣ್ಣ ದೇಯಣ್ಣವರ, ಸಿ.ಎಂ.ಬೂದಿಹಾಳ, ಮುರುಘೇಂದ್ರಗೌಡ ಪಾಟೀಲ ಇದ್ದರು.

ಸರ್ವ ಧರ್ಮಗಳನ್ನು ಪ್ರತಿಬಿಂಬಿಸುವ ಈ ರಥಯಾತ್ರೆ ಹಮ್ಮಿಕೊಂಡಿರುವ ಸರ್ಕಾರದ ನಿರ್ಧಾರವನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇವೆ
ಸಿದ್ಧಬಸವದೇವರು ಹುಣಶಿಕೊಳ್ಳ ಮಠ

ಬೈಕ್ರ್ಯಾಲಿಗೆ ಅದ್ಧೂರಿ ಚಾಲನೆ

ಬೆಳಗಾವಿ: ಬಸವ ಜಯಂತಿ ಉತ್ಸವದ ಅಂಗವಾಗಿ ಬೆಳಗಾವಿಯ ಗೋವಾ ವೇಸ್ನ ಬಸವೇಶ್ವರ ವೃತ್ತದಲ್ಲಿ ಬೈಕ್ ರ್ಯಾಲಿಗೆ ಚಾಲನೆ ನೀಡಲಾಯಿತು. ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ ನಾಗನೂರು ರುದ್ರಾಕ್ಷಿ ಮಠದ ಅಲ್ಲಮಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸದ ಜಗದೀಶ ಶೆಟ್ಟರ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷ ಪ್ರಭಾಕರ ಕೋರೆ ಶಾಸಕರಾದ ಅಭಯ ಪಾಟೀಲ ಮಾಜಿ ಎಂಎಲ್ಸಿ ಮಹಾಂತೇಶ ಕವಟಗಿಮಠ ಬಸವಣ್ಣನವರ ಪ್ರತಿಮೆಗೆ ಪೂಜೆ ಸಲ್ಲಿಸಿ ಷಟ್ಸ್ಥಲ ಧ್ವಜಾರೋಹಣ ಮಾಡಿದರು. ಮಹಾಸಭೆ ಜಿಲ್ಲಾ ಘಟಕದ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ ಲಿಂಗಾಯತ ಸಂಘಟನೆ ಈರಣ್ಣ ದೇಯನ್ನವರ ರಾಷ್ಟ್ರೀಯ ಬಸವ ದಳದ ಅಶೋಕ ಬೆಂಡಿಗೇರಿ ಚಂದ್ರಶೇಖರ ಬೆಂಬಳಗಿ ಶಂಕರ ಗುಡಸ ಎಂ.ಬಿ.ಜೀರಲಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಒಂದಾದ ಸಂಘಟನೆಗಳು

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಜಾಗತಿಕ ಲಿಂಗಾಯತ ಮಹಾಸಭೆ ಲಿಂಗಾಯತ ಸಂಘಟನೆ ರಾಷ್ಟ್ರೀಯ ಬಸವದಳ ಲಿಂಗಾಯತ ಮಹಿಳಾ ಸಮಾಜ ಲಿಂಗಾಯತ ಸೇವಾ ಸಮಿತಿ ಬಸವ ಕಾಯಕ ಜೀವಿಗಳ ಸಂಘ ಬಸವೇಶ್ವರ ಯುವಕ ಸಂಘ ಮಹಾಂತೇಶ ನಗರದ ಲಿಂಗಾಯತ ಧರ್ಮ ಮಹಾಸಭಾ ಸಹ್ಯಾದ್ರಿ ನಗರದ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘ ಲಿಂಗಾಯತ ಬಿಜ್ನೆಸ್ ಫೋರಂ ಶಾಹಾಪೂರದ ಶ್ರೀ ದಾನಮ್ಮದೇವಿ ಮಂದಿರ ಮತ್ತು ಬಸವೇಶ್ವರ ಕಲ್ಯಾಣ ಮಂಟಪ ಟ್ರಸ್ಟ್ ಈ ಮೊದಲಾದ ಸಂಘ ಸಂಸ್ಥೆಗಳ ಮುಖಂಡರು ರ್ಯಾಲಿಯಲ್ಲಿ ಪಾಲ್ಗೊಂಡರು. ಬೈಕ್ ಸವಾರಿ ಆರ್ಪಿಡಿ ಸರ್ಕಲ್ ಬಿಗ್ ಬಜಾರ್ ಅನಗೋಳ ಮುಖ್ಯ ರಸ್ತೆ ವಡಗಾಂವ ಮುಖ್ಯ ರಸ್ತೆ ನಾಥ್ ಪೈ ಸರ್ಕಲ್ ಶಹಾಪುರ ಖಾಡೆ ಬಜಾರ್ ಶಿವಾಜಿ ಗಾರ್ಡನ್ ಕಪಿಲೇಶ್ವರ್ ಮಾರ್ಗ ರಾಮದೇವ್ ಗಲ್ಲಿ ಸಾಮಾದೇವಿ ಗಲ್ಲಿ ಕಾಲೇಜ್ ರಸ್ತೆ ಚನ್ನಮ್ಮ ವೃತ್ತ ಆರ್.ಎನ್.ಶೆಟ್ಟಿ ನಾಗನೂರು ಮಠ ಲಿಂಗಾಯತ ಭವನ ಶ್ರೀನಗರ ಉದ್ಯಾನ ಮಹಾಂತೇಶ್ ನಗರ ಹರ್ಷಾ ಹೋಟೆಲ್ ಮೂಲಕ ರಾಮತೀರ್ಥ ನಗರದಲ್ಲಿ ಕೊನೆಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.