ಶುಕ್ರವಾರ, ನವೆಂಬರ್ 22, 2019
27 °C

ಗಣೇಶೋತ್ಸವ ಮೆರವಣಿಗೆ: ಮಾರ್ಗ ಬದಲಾವಣೆ

Published:
Updated:

ಬೆಳಗಾವಿ: ನಗರದಲ್ಲಿ ಸಾರ್ವಜನಿಕ ಗಣೇಶೋತ್ಸವದ ಅಂತಿಮ ದಿನದ ಮೆರವಣಿಗೆಯು ಸೆ. 12ರಂದು ನಡೆಯಲಿದೆ.

ನರಗುಂದಕರ ಭಾವೆ ಚೌಕದಿಂದ ಆರಂಭವಾಗಿ ಮಾರುತಿ ಗಲ್ಲಿ, ಹುತಾತ್ಮ ಚೌಕ, ರಾಮದೇವ ಗಲ್ಲಿ, ಸಮಾದೇವಿ ಗಲ್ಲಿ, ಯಂಡೇಕೂಟ, ಕಾಲೇಜು ರಸ್ತೆ, ಧರ್ಮವೀರ ಸಂಭಾಜಿ ಚೌಕ (ಬೋಗಾರ್‌ವೇಸ್‌), ರಾಮಲಿಂಗಖಿಂಡ್‌ ಗಲ್ಲಿ ರಸ್ತೆ, ಟಿಳಕಚೌಕ, ಹೇಮು ಕಾಲೊನಿ ಚೌಕ (ಶಿವಭವನ), ಶನಿಮಂದಿರ, ಕಪಿಲೇಶ್ವರ ಮೇಲ್ಸೇತುವೆ ಮೂಲಕ ಕಪಿಲೇಶ್ವರ ಮಂದಿರದ ಬಳಿ ಮುಕ್ತಾಯಗೊಳ್ಳಲಿದೆ.

‘ಈ ಕಾರಣದಿಂದ, ಸಾರ್ವಜನಿಕರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಅಂದು ಮಧ್ಯಾಹ್ನ 2ರಿಂದ 13ರಂದು ಮೆರವಣಿಗೆ ಮುಕ್ತಾಯದವರೆಗೆ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಪರ್ಯಾಯ ಮಾರ್ಗಗಳನ್ನು ಬಳಸಬೇಕು. ಪೊಲೀಸರೊಂದಿಗೆ ಸಹಕರಿಸಬೇಕು’ ಎಂದು ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್‌ ತಿಳಿಸಿದ್ದಾರೆ.

* ಚನ್ನಮ್ಮ ವೃತ್ತದಿಂದ ಕಾಲೇಜು ರಸ್ತೆ ಮೂಲಕ ಖಾನಾಪುರ ಕಡೆಗೆ ಹೋಗಲು ಚನ್ನಮ್ಮ ವೃತ್ತದ ಗಣೇಶ ಮಂದಿರದ ಹಿಂದೆ ಬಲತಿರುವು ತೆಗೆದುಕೊಂಡು ಕ್ಲಬ್ ರಸ್ತೆ– ಗಾಂಧಿ ವೃತ್ತ–ಶೌರ್ಯ ಚೌಕ– ಕೇಂದ್ರೀಯ ವಿದ್ಯಾಲಯ ನಂ.2–ಶರ್ಕತ್ ಉದ್ಯಾನ– ಗ್ಲೋಬ್ ಥಿಯೇಟರ್ ವೃತ್ತದ ಮಾರ್ಗ ಬಳಸಬೇಕು.

* ಜೀಜಾಮಾತಾ ವೃತ್ತದಿಂದ ದೇಶಪಾಂಡೆ ಪೆಟ್ರೋಲ್ ಪಂಪ್, ನರಗುಂದಕರ ಭಾವೆ ಚೌಕ/ ಕಂಬಳಿ ಖೂಟ, ಪಿಂಪಳ ಕಟ್ಟಾ, ಪಾಟೀಲ ಗಲ್ಲಿ ಕಡೆಗೆ ಸಂಚರಿಸುವ ವಾಹನಗಳು ಜೀಜಾ ಮಾತಾ ವೃತ್ತದಿಂದ ನೇರವಾಗಿ ಹಳೇ ಪಿಬಿ ರಸ್ತೆಯಲ್ಲಿ ಸಾಗಬೇಕು.

* ನಾಥಪೈ ವೃತ್ತದಿಂದ ಬ್ಯಾಂಕ್‌ ಆಫ್ ಇಂಡಿಯಾ ಮಾರ್ಗವಾಗಿ ಕಪಿಲೇಶ್ವರ ರೈಲ್ವೆ ಮೇಲ್ಸೇತುವೆ ಮೂಲಕ ಸಂಚರಿಸುವ ಎಲ್ಲ ವಾಹನಗಳು ಎಸ್.ಪಿ.ಎಂ. ರಸ್ತೆ– ಭಾತಕಾಂಡೆ ಸ್ಕೂಲ್ ಕ್ರಾಸ್‌ನಲ್ಲಿ ಬಲತಿರುವು ತೆಗೆದುಕೊಂಡು ಕಪಿಲೇಶ್ವರ ಕಾಲೊನಿ– ವಿಆರ್‌ಎಲ್ ಲಾಜಿಸ್ಟಿಕ್ ರಸ್ತೆ ಮೂಲಕ ಹೋಗಬೇಕು.

* ಹಳೆ ಪಿ.ಬಿ. ರಸ್ತೆ, ಭಾತಕಾಂಡೆ ಸ್ಕೂಲ್ ಮಾರ್ಗವಾಗಿ ಕಪಿಲೇಶ್ವರ ಮೇಲ್ಸೇತುವೆ ಮೂಲಕ ಸಂಚರಿಸುವವರು ಭಾತಕಾಂಡೆ ಸ್ಕೂಲ್ ಕ್ರಾಸ್ ಹತ್ತಿರ ಎಡತಿರುವು ಪಡೆದು ಶಿವಾಜಿ ಉದ್ಯಾನ, ಬ್ಯಾಂಕ್ ಆಫ್ ಇಂಡಿಯಾ ಕ್ರಾಸ್, ಮಹಾತ್ಮಾ ಫುಲೆ ರಸ್ತೆ ಮಾರ್ಗವಾಗಿ ಸಾಗಬೇಕು.

* ಹಳೆ ಪಿ.ಬಿ. ರಸ್ತೆ, ಯಶ್ ಆಸ್ಪತ್ರೆ, ಮಹಾದ್ವಾರ ರಸ್ತೆ, ಕಪಿಲೇಶ್ವರ ಮಂದಿರ ಮೂಲಕ ರೇಲ್ವೆ ಕೆಳಸೇತುವೆ ಕಡೆಗೆ ಸಾಗುವ ವಾಹನಗಳು  ಯಶ್ ಆಸ್ಪತ್ರೆ ಹತ್ತಿರ ಎಡ/ ಬಲ ತಿರುವು ಪಡೆದು ಭಾತಕಾಂಡೆ ಸ್ಕೂಲ್/ತಾನಾಜಿ ಗಲ್ಲಿ ರೈಲ್ವೆ ಗೇಟ್‌ ಮೂಲಕ ಹೋಗಬೇಕು.

* ಗೂಡ್ಸ್ ಶೆಡ್ ರಸ್ತೆ ಮೂಲಕ ಕಪಿಲೇಶ್ವರ ಮೇಲ್ಸೇತುವೆ ಕಡೆಗೆ ಸಂಚರಿಸುವವರು ಎಸ್.ಪಿ.ಎಂ. ರಸ್ತೆ ಬದಲಿಗೆ ಮರಾಠಾ ಮಂದಿರ ಗೋವಾವೇಸ್ ವೃತ್ತದ ಕಡೆಗೆ ಹೋಗಬೇಕು.

* ಖಾನಾಪುರ ರಸ್ತೆ, ಬಿಎಸ್‌ಎನ್‌ಎಲ್ ಕಚೇರಿ ಕ್ರಾಸ್, ಸ್ಟೇಷನ್‌ ರಸ್ತೆ ಹಾಗೂ ಗೋಗಟೆ ವೃತ್ತ ಕಡೆಯಿಂದ ರೈಲು ನಿಲ್ದಾಣ, ಮುಖ್ಯ ಅಂಚೆ ಕಚೇರಿ ಮೂಲಕ ಶನಿಮಂದಿರದ ಕಡೆಗೆ ಸಂಚರಿಸುವ ವಾಹನಗಳು ಗ್ಲೋಬ್ ವೃತ್ತ ಬಳಿ ಎಡ ತಿರುವು ಪಡೆದುಕೊಂಡು, ಶರ್ಕತ್‌ ಪಾರ್ಕ್‌, ಕೇಂದ್ರಿಯ ವಿದ್ಯಾಲಯ ನಂ.2, ಶೌರ್ಯ ಚೌಕ, ಗಾಂಧಿ ವೃತ್ತ, ಕ್ಲಬ್ ರಸ್ತೆ ಮೂಲಕ ಚನ್ನಮ್ಮ ವೃತ್ತ ಸೇರಬೇಕು.

ಮೆರವಣೆಗೆ ಸಾಗುವ ಮಾರ್ಗದ ರಸ್ತೆಗಳ ಎರಡೂ ಬದಿಗಳಲ್ಲಿ ಎಲ್ಲ ಮಾದರಿಯ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)