ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಳಗಾವಿ ಜಿಲ್ಲೆಯ ಸಣ್ಣಾಟಗಳ ಸಮ್ಮೇಳನ 5ರಿಂದ: ಕೆ.ಆರ್.ದುರ್ಗಾದಾಸ್

Published : 3 ಸೆಪ್ಟೆಂಬರ್ 2024, 6:04 IST
Last Updated : 3 ಸೆಪ್ಟೆಂಬರ್ 2024, 6:04 IST
ಫಾಲೋ ಮಾಡಿ
Comments

ಬೆಳಗಾವಿ: 'ಜಿಲ್ಲೆಯ ಹುಕ್ಕೇರಿಯಲ್ಲಿ ಕರ್ನಾಟಕ ಬಯಲಾಟ ಅಕಾಡೆಮಿ ಆಶ್ರಯದಲ್ಲಿ ಇದೇ 5, 6ರಂದು ಜಿಲ್ಲೆಯ ಸಣ್ಣಾಟಗಳ ಸಮ್ಮೇಳನ ನಡೆಯಲಿದೆ' ಎಂದು ಅಕಾಡೆಮಿ ಅಧ್ಯಕ್ಷ ಕೆ.ಆರ್.ದುರ್ಗಾದಾಸ್ ಹೇಳಿದರು.

ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, '5ರಂದು ಬೆಳಿಗ್ಗೆ 10.30ಕ್ಕೆ ರಂಗಭೂಮಿ ತಜ್ಞ ವೀರಣ್ಣ ರಾಜೂರ ಉದ್ಘಾಟಿಸುವರು. ಸಾಹಿತಿಗಳಾದ ರಾಮಕೃಷ್ಣ ಮರಾಠೆ, ಗುರುಪಾದ ಮರಿಗುದ್ದಿ, ರಾಜಶೇಖರ ಇಚ್ಚಂಗಿ, ಆರ್.ಎಫ್.ಬಾಳಪ್ಪನವರ, ಸಿ.ಕೆ.ನಾವಲಗಿ ಉಪನ್ಯಾಸ ನೀಡುವರು. ಅಕಾಡೆಮಿ ಸದಸ್ಯರಾದ ಭೀಮಪ್ಪ ಹುದ್ದಾರ, ಮಲ್ಲಪ್ಪ‌ ಮಾದರ ಸಂಚಾಲಕರಾಗಿ ಕಾರ್ಯನಿರ್ವಹಿಸುವರು. ಪ್ರಾತಿನಿಧಿಕ ಐದು ಸಣ್ಣಾಟ ತಂಡಗಳ 50 ಕಲಾವಿದರು ಹಾಡುಗಾರಿಕೆ, ಪ್ರದರ್ಶನ ನೀಡುವರು' ಎಂದರು.

'ಸಣ್ಣಾಟಗಳಿಗೆ ಬೆಳಗಾವಿ ಜಿಲ್ಲೆ ತವರುಮನೆ ಎಂದೇ ಪ್ರಸಿದ್ಧಿ ಗಳಿಸಿದೆ. ಹತ್ತಾರು ಬಗೆಯ ಹೊಸ ಪ್ರಯೋಗಗಳು ಇಲ್ಲಿ‌ ನಡೆದಿವೆ.

ಈ ಭಾಗದಲ್ಲಿ ವಿಶಿಷ್ಟವಾಗಿ ಕಂಡುಬರುವ ರಂಗಪ್ರಕಾರ ಇದಾಗಿದೆ. ಭಕ್ತಿ ಪ್ರೇರಿತವಾಗಿ ಹುಟ್ಟಿಕೊಂಡ ಈ ಸಣ್ಣಾಟಗಳು ಸಮಕಾಲೀನ ಜನರ ಆಶೋತ್ತರಗಳನ್ನು ಈಡೇರಿಸುತ್ತ ಬಂದಿವೆ. ಯುವಜನರು ಸಣ್ಣಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡು, ಸಮಕಾಲೀನ ಸಮಸ್ಯೆಗಳಿಗೆ ಧ್ವನಿಯಾಗಬೇಕು' ಎಂದು ಕೋರಿದರು.

ಭೀಮಪ್ಪ‌ ಹುದ್ದಾರ, ಕರ್ಣಕುಮಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT