ಶುಕ್ರವಾರ, ಅಕ್ಟೋಬರ್ 7, 2022
23 °C

ಮೋದಿ ಜನ್ಮದಿನ: ಕೆಎಲ್‌ಇ ರಕ್ತದಾನ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನಾಚರಣೆ ಅಂಗವಾಗಿ ಕೆಎಲ್‌ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ರಕ್ತ ಭಂಡಾರವು ವಿವಿಧ ಪ್ರದೇಶಗಳಲ್ಲಿ ಏರ್ಪಡಿಸಿದ ರಕ್ತದಾನ ಶಿಬಿರದಲ್ಲಿ 310ಕ್ಕೂ ಅಧಿಕ ಜನರು ರಕ್ತದಾನ ಮಾಡಿದರು.

ಆರ್‌.ಎಲ್. ವಿಜ್ಞಾನ ಮಹಾವಿದ್ಯಾಲಯದ 20 ವಿದ್ಯಾರ್ಥಿಗಳು, ಬೈಲಹೊಂಗಲದ ಕೆಆರಸಿಎಸ್ ಮಹಾವಿದ್ಯಾಲಯದ 100 ವಿದ್ಯಾರ್ಥಿಗಳು ಹಾಗೂ ನಾಗರಿಕರು ಹಾಗೂ ಟೆನಿಸ್‌ ಹಾಲ್‌ನಲ್ಲಿ 76 ಜನ, ಜೆಎನ್‌ಎಂಸಿಯ 100 ವಿದ್ಯಾಥಿಗಳು ಹಾಗೂ ಸಾರ್ವಜನಿಕರು ರಕ್ತದಾನ ಮಾಡಿದರು.

ಆಸ್ಪತ್ರೆಯಲ್ಲಿ ನಡೆದ ಸಮಾರಂಭದಲ್ಲಿ ಬೆಳಗಾವಿ ಔಷಧ ನಿಯಂತ್ರಣಾ ಉಪನಿರ್ದೇಶಕ ರಘುರಾಮ ಎನ್.ವಿ. ಮಾತನಾಡಿ, ರಕ್ತದ ಪ್ರಮಾಣ ಹಾಗೂ ವಿಧಾನಗಳು ಬದಲಾವಣೆ ಆಗಬಹುದು. ಆದರೆ, ಒಬ್ಬ ವ್ಯಕ್ತಿ 350 ಮಿ.ಲೀ. ರಕ್ತ ನೀಡಬಹುದು. ರಕ್ತ ಸಂಗ್ರಹಣೆಯನ್ನು ಸಾಮಾನ್ಯ ರೂಢಿಯಂತೆ ಅಥವಾ ಸ್ವಯಂಚಾಲಿತ ರಕ್ತಸಂಗ್ರಹಣ ಯಂತ್ರದಿಂದಲೂ ಸಂಗ್ರಹಿಸಬಹುದು ಎಂದರು.

ರಕ್ತ ಭಂಡಾರದ ಮುಖ್ಯಸ್ಥ ಎಸ್‌.ವಿ. ವೀರಗಿ, ಡಾ.ಅವಿನಾಶ ಕವಿ, ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ.ಸುನೀಲ ಜಲಾಲಪೂರೆ, ಡಾ.ಸೌಮ್ಯ ಮಾಸ್ತೆ, ಡಾ.ಎಂ.ಎಸ್. ಗಣಾಚಾರಿ, ಹರ್ಷವರ್ಧನ ಇಂಚಲ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು