ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಾಗೃತಿ ಮೂಡಿಸುವ ಸಾಹಿತ್ಯ ಕೃತಿಗಳು’

Last Updated 20 ಅಕ್ಟೋಬರ್ 2019, 13:48 IST
ಅಕ್ಷರ ಗಾತ್ರ

ಗೋಕಾಕ: ‘ಸಾಹಿತ್ಯ ಕೃತಿಗಳು ನೂರಾರು ವರ್ಷಗಳು ಜೀವಂತವಿದ್ದು ಸದಾ ಜನರಲ್ಲಿ ಜಾಗೃತಿ ಮೂಡಿಸುತ್ತವೆ’ ಎಂದು ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯ ಸಂಚಾಲಕ ಡಾ.ಎಂ.ಜಿ.ಆರ್. ಅರಸ್ ಹೇಳಿದರು.

ಭಾನುವಾರ ಇಲ್ಲಿನ ಸತೀಶ ಶುಗರ್ಸ್ ಪದವಿ ಕಾಲೇಜಿನಲ್ಲಿ ಕಾವ್ಯಕೂಟ ಕನ್ನಡ ಬಳಗ ರಾಜ್ಯ ವೇದಿಕೆಯ ಉದ್ಘಾಟನೆ ಹಾಗೂ ಕವನ ಸಂಕಲನಗಳ ಲೋಕಾರ್ಪಣೆ ಮತ್ತು ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

‘ಚುಟುಕು ಸಾಹಿತ್ಯ, ವಚನಗಳು ಮನುಕುಲದ ಆದ್ಯ ಕಾವ್ಯಗಳಾಗಿ ಬದುಕಿಗೆ ದಾರಿದೀಪವಾಗಿ ಸಮಾಜದ ಬದಲಾವಣೆಗೆ ಕಾರಣವಾಗಿವೆ. ವಚನಗಳು ಸಾಹಿತ್ಯ ಕ್ಷೇತ್ರದ ಮಿಂಚು ಹುಳುಗಳಾಗಿ ನಮ್ಮ ಮನದಾಳದಲ್ಲಿ ಸದಾ ನೆಲೆಸುತ್ತವೆ. ಕವಿತೆಗಳು ಅಪರಂಜಿ, ಚುಟುಕುಗಳು ಗುಲಗಂಜಿ’ ಎಂದು ಬಣ್ಣಿಸಿದರು.

ಶಿಕ್ಷಕ ಈಶ್ವರ ಮಮದಾಪೂರ ಸಂಪಾದಿತ ಕವನ ಸಂಕಲನ ‘ಕಾವ್ಯಯಾನ’ ಮತ್ತು ‘ಮಮದಾಪೂರ ಹನಿಗಳು’ ಹಾಗೂ ಶಮಾ ಜಮಾದಾರ ಅವರ ‘ಬಿಂಬ’ ಕವನಸಂಕಲನ ಬಿಡುಗಡೆ ಮಾಡಲಾಯಿತು.

ಸಾಹಿತಿಗಳಾದ ಪ್ರೊ.ಚಂದ್ರಶೇಖರ ಅಕ್ಕಿ, ಡಾ.ರತ್ನಾ ಹಾಲಪ್ಪಗೌಡ, ಧಾರವಾಡ ಡಿಡಿಪಿಐ ಗಜಾನನ ಮನ್ನಿಕೇರಿ ಮಾತನಾಡಿದರು.

ಮಮದಾಪೂರದ ಚರಮೂರ್ತೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬೆಂಗಳೂರಿನ ಸಾಹಿತಿ ಅನುಸೂಯ ಸಿದ್ರಾಮ ಅಧ್ಯಕ್ಷತೆ ವಹಿಸಿದ್ದರು. ಕೆಎಲ್ಇ ಸಂಸ್ಥೆ ನಿರ್ದೇಶಕ ಜಯಾನಂದ ಮುನವಳ್ಳಿ, ನೂತನ ಬಳಗದ ರಾಜ್ಯ ಅಧ್ಯಕ್ಷ ಈಶ್ವರ ಮಮದಾಪೂರ, ಎಸ್.ಎಸ್.ಎ. ಕಾಲೇಜಿನ ಆಡಳಿತಾಧಿಕಾರಿ ಪ್ರೊ.ಆರ್.ಎಸ್. ಡುಮ್ಮಗೋಳ, ಎನ್.ಎಸ್.ಎಫ್. ಕಾರ್ಯದರ್ಶಿ ಎಸ್.ಎ. ರಾಮಗಾನಟ್ಟಿ ಇದ್ದರು.

ಶಕುಂತಲಾ ಕೋನನ್ನವರ ಹಾಗೂ ಬಳಗದ ಸದಸ್ಯರು ಕಾವ್ಯ ಕೂಟ ಗೀತೆ ಪ್ರಸ್ತುತಪಡಿಸಿದರು. ಯೋಗೇಂದ್ರ ಆಚಾರ್ಯ ಸ್ವಾಗತಿಸಿದರು. ದೇವರಾಜ ಹುಣಸೀಕಟ್ಟಿ ನಿರೂಪಿಸಿದರು. ಜಯಲಕ್ಷ್ಮಿ ಮೆಣಸಿನಕಾಯಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT