ಸವದತ್ತಿ: ಇಲ್ಲಿನ ಧಾರವಾಡ ರಸ್ತೆಯಲ್ಲಿರುವ ಪುರಸಭೆ ಕಸ ವಿಲೇವಾರಿ ಸಂಕೀರ್ಣದ ಸಮೀಪ ಶುಕ್ರವಾರ ರಾತ್ರಿ ಬೊಲೆರೊ ಮತ್ತು ಟಾಟಾ ಏಸ್ ವಾಹನ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಆರು ಮಂದಿ ಸ್ಥಳದಲ್ಲೇ ಸಾವಿಗೀಡಾದರು.

ತಾಲ್ಲೂಕಿನ ಚುಂಚನೂರ ಹಾಗೂ ಜಕಬಾಳ ಗ್ರಾಮಗಳ ಕೂಲಿ ಕಾರ್ಮಿಕರು ಧಾರವಾಡ ಜಿಲ್ಲೆಯ ಮೊರಬ್ ಗ್ರಾಮದ ಜಮೀನಿನಲ್ಲಿ ಕೂಲಿ ಕೆಲಸ ಮುಗಿಸಿ ವಾಪಸಾಗುವಾಗ ಘಟನೆ ನಡೆದಿದೆ.

‘ಡಿಕ್ಕಿಯ ರಭಸಕ್ಕೆ ವಾಹನಗಳು ನುಜ್ಜು ಗುಜ್ಜಾಗಿವೆ. ಮೃತರಲ್ಲಿ ಮೂವರ ಗುರುತಷ್ಟೆ ಪತ್ತೆಯಾಗಿದೆ. ಅವರು ಚುಂಚನೂರ ಗ್ರಾಮದ ಯಲ್ಲವ್ವ ಯಲ್ಲಪ್ಪ ಮುರಕಿಭಾವಿ (65), ಪಾರವ್ವ ಹುರಳಿ (35), ರುಕ್ಮವ್ವ ವಡಕಣ್ಣವರ (35) ಎಂದು ತಿಳಿದುಬಂದಿದೆ. ಬೊಲೆರೊ ಚಾಲಕ ಸಾವಿಗೀಡಾಗಿದ್ದಾರೆ. ಅವರೂ ಸೇರಿ ಮೂವರ ಮಾಹಿತಿ ಸಂಗ್ರಹಿಸಲಾಗುತ್ತಿದೆ. 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರೂ ಆಘಾತಗೊಂಡಿದ್ದಾರೆ. ಚೇತರಿಸಿಕೊಂಡ ನಂತರ ಮಾಹಿತಿ ಪಡೆಯಲಾಗುವುದು’ ಎಂದು ಪೊಲೀಸರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.