ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೂಡಲಗಿ | ಕಾರು ಡಿಕ್ಕಿ: ಬಾಲಕ ಸಾವು

Published 17 ಜೂನ್ 2024, 12:12 IST
Last Updated 17 ಜೂನ್ 2024, 12:12 IST
ಅಕ್ಷರ ಗಾತ್ರ

ಮೂಡಲಗಿ: ತಾಲ್ಲೂಕಿನ ನಾಗನೂರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಮೀಪ ಸೋಮವಾರ ಮೂಡಲಗಿ– ಗೋಕಾಕ ರಾಜ್ಯ ಹೆದ್ದಾರಿ ಮೇಲೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬಾಲಕ ಮೃತಪಟ್ಟಿದ್ದಾನೆ.

ನಾಗನೂರಿನ ಲಕ್ಷ್ಮಣ ಕೆಂಚನವರ ಅವರ ಪುತ್ರ ವಿನಾಯಕ (8) ಅಪಘಾತಕ್ಕೆ ಬಲಿಯಾದ ಬಾಲಕ. ರಾಯಬಾಗ ತಾಲ್ಲೂಕಿನ ಆಲಕನೂರು ಗ್ರಾಮದ, ಚಾಲಕ ದೇವಪ್ಪ ಅರ್ಜುನ ಯಲ್ಲಟ್ಟಿ ಅಪಘಾತಪಡಿಸಿದ ಆರೋಪಿ.

ನಾಗನೂರು ಕಡೆಯಿಂದ ಗೋಕಾಕ ಮಾರ್ಗವಾಗಿ ಕಾರ್‌ ವೇಗವಾಗಿ ಸಂಚರಿಸುತ್ತಿತ್ತು. ಬಾಲಕ ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ದಾಟುತ್ತಿದ್ದ. ಆಗ ಚಾಲಕನ ನಿಯಂತ್ರಣಕ್ಕೆ ಬಾರದೇ ಕಾರು ಬಾಲಕನಿಗೆ ಗುದ್ದಿತು. ಬಾಲಕನ ತಲೆ ಹಾಗೂ ಪಕ್ಕೆಲುಬುಗಳಿಗೆ ತೀವ್ರ ಗಾಯಗಳಾದವು.

ಕಾರ್‌ ಚಾಲಕ ತನ್ನದೇ ಕಾರಿನಲ್ಲಿ ಬಾಲಕನ್ನು ಹತ್ತಿಸಿಕೊಂಡು ನಾಗನೂರಿನ ಖಾಸಗಿ ಆಸ್ಪತ್ರೆಗೆ ಕರೆತಂದ. ಆದರೆ, ಅಷ್ಟರೊಳಗೆ ಬಾಲಕ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದರು. ಅಲ್ಲಿಂದ ಮೃತದೇಹವನ್ನು ಗೋಕಾಕದ ಸರ್ಕಾರಿ ಆಸ್ಪತ್ರೆಗೆ ತಂದು ಪಾಲಕರಿಗೆ ಒಪ್ಪಿಸಿದ. ಮರಣೋತ್ತರ ಪರೀಕ್ಷೆಗೆ ಶವ ಒಪ್ಪಿಸಿದ ಬಳಿಕ, ಮೂಡಲಗಿ ಠಾಣೆಗೆ ಬಂದು ಶರಣಾದ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT