ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಗವಾಡ | ಜಾತ್ರೆ: ಜಾನುವಾರು ಮಾರಾಟ ಜೋರು

Published 5 ಮಾರ್ಚ್ 2024, 14:20 IST
Last Updated 5 ಮಾರ್ಚ್ 2024, 14:20 IST
ಅಕ್ಷರ ಗಾತ್ರ

ಕಾಗವಾಡ: ಗಡಿಭಾಗ ಕಾಗವಾಡ ತಾಲ್ಲೂಕಿನ‌ ಮೋಳೆ ಗ್ರಾಮದ ಓಘ ಸಿದ್ಧೇಶ್ವರ ಜಾತ್ರೆಯ ಅಂಗವಾಗಿ ಜಾನುವಾರುಗಳ ಮಾರಾಟ ಬಿರುಸಿನಿಂದ ನಡೆಯಿತು.

‘ಎರಡು ವರ್ಷಗಳಿಂದ ಯಾವುದೇ ಜಾತ್ರೆಗಳು ಸರಿಯಾಗಿ ನಡೆಯಲಿಲ್ಲ. ಈ ಜಾತ್ರೆಯಲ್ಲಿ ಜಾನುವಾರು ಸಾಕಷ್ಟು ಸೇರಿವೆ. ಒಂದೇ ಎತ್ತು ₹80 ಸಾವಿರಕ್ಕೆ ಮಾರಾಟವಾಗಿದೆ. ಜಾತ್ರೆಗೆ ಬರುವ ಜಾನುವಾರುಗಳಿಗೆ ಕುಡಿಯಲು ನೀರು, ಮಾಲೀಕರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ’ ಎಂದು ರೈತ ಸಿದ್ದಗೊಂಡ ಪೂಜಾರಿ ಮಾಹಿತಿ ನೀಡಿದರು.

ಸೋಮವಾರ ಮುಂಜಾನೆ ಸಿದ್ದೇಶ್ವರ ದೇವರಿಗೆ ಮಾಹಾ ಪೂಜೆ ನೈವೇದ್ಯ ನಡೆಯಿತು. ಸಂಜೆ ವಿವಿಧ ತಂಡಗಳಿಂದ ಚೌಡಕಿ ಪದಗಳ ಕಾರ್ಯಕ್ರಮ ನಡೆಯಿತು. ಮಂಗಳವಾರ ವಿವಿಧ ಗ್ರಾಮಗಳಿಂದ ಆಗಮಿಸಿದ ದೇವರ ಪಲ್ಲಕ್ಕಿ ಬೀಳ್ಕೊಡುವ ಕಾರ್ಯಕ್ರಮ ನಡೆಯಿತು. ಮಹಾರಾಷ್ಟ್ರದ ಸೋಲಾಪುರ ಜಿಲ್ಲೆ ಸಾಂಗೋಲಾ ಪಟ್ಟಣದ ರೈತ ರಮೇಶ ಗೆಜಗೆ, ಜಾತ್ರೆಯ ಕಮಿಟಿ ಅಧ್ಯಕ್ಷ ಬಾಳಪ್ಪ ನರಟ್ಟಿ, ಧರ್ಮಾಜಿ ಕೋಳೆಕರ, ಭರತೇಶ ಪಡನಾಡ, ಬಸು ತೇಲಿ, ಅವ್ವಣ್ಣ ಪಾಟೀಲ, ಮುರಗೆಪ್ಪ ಹಳಮನಿ, ಲಕ್ಷ್ಮಣ ನರಟ್ಟಿ, ಸುರೇಶ ಕೋಳೆಕರ, ಬಸವರಾಜ ಸುರಗೊಂಡ, ವಿಠ್ಠಲ ಕೋಳೆಕರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT