ಹುಕ್ಕೇರಿ: ರೈತರ ಆರ್ಥಿಕ ಜೀವನಾಡಿಯಾಗಿರುವ ಸಹಕಾರ ಸಂಘಗಳು ರಾಜಕೀಯ ರಹಿತವಾಗಿರಬೇಕು. ರಾಜಕೀಯ ಚುನಾವಣೆಗೆ ಮಾತ್ರ ಸೀಮಿತವಾಗಿರಬೇಕು. ಚುನಾವಣೆ ನಂತರ ಜಾತ್ಯತೀತ ಮತ್ತು ಪಕ್ಷಾತೀತವಾಗಿ ಆಡಳಿತ ಮಂಡಳಿ ಕಾರ್ಯ ನಿರ್ವಹಿಸಬೇಕು ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ ಕತ್ತಿ ಹೇಳಿದರು.

ಈಚೆಗೆ ಅವಿರೋಧವಾಗಿ ಆಯ್ಕೆಯಾದ ತಾಲ್ಲೂಕಿನ ಶಿರಗಾಂವ ಗ್ರಾಮದ ಪಿಕೆಪಿಎಸ್ ನಂ.1ರ ನೂತನ ಆಡಳಿತ ಮಂಡಳಿ ಅವರಿಂದ ಸತ್ಕಾರ ಸ್ವೀಕರಿಸಿ ಬೆಲ್ಲದ ಬಾಗೇವಾಡಿಯಲ್ಲಿ ಮಾತನಾಡಿದರು.

ಆಡಳಿತ ಮಂಡಳಿಯವರು ರೈತರ ಸಮಸ್ಯೆ ಬೇಗನೆ ಅರಿತುಕೊಂಡು ರೈತರ ಸೇವೆ ಮಾಡುವಂತೆ ಸಲಹೆ ನೀಡಿದರು.

ನಿಕಟಪೂರ್ವ ಅಧ್ಯಕ್ಷ ರಾಜೇಶ ಬಿರಾದಾರ ಪಾಟೀಲ ಮತ್ತು ನೂತನ ಅಧ್ಯಕ್ಷ ಬಸವರಾಜ ಘಟಿಗೆನ್ನವರ ಮಾತನಾಡಿ, ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಂಘದ ಸದಸ್ಯರ, ಹಿರಿಯರ ಹಾಗೂ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ ಕತ್ತಿ ಮತ್ತು ಶಾಸಕ ನಿಖಿಲ ಕತ್ತಿ ಅವರ ಮಾರ್ಗದರ್ಶನದಲ್ಲಿ ಅವಿರೋಧವಾಗಿ ಆಯ್ಕೆ ಜರುಗಿತು ಎಂದರು.

ಸಂಘದ ಅಧ್ಯಕ್ಷ ಬಸವರಾಜ ಘಟಿಗೆನ್ನವರ, ಉಪಾಧ್ಯಕ್ಷ ಮಲ್ಲಿಕಾರ್ಜುನ ತೇರಣಿ, ನಿರ್ದೇಶಕರಾದ ರಾಜೇಶ ಬಿರಾದಾರ ಪಾಟೀಲ, ಬಸವಣ್ಣಿ ಪಡೆಪ್ಪಗೋಳ, ಮಲ್ಲಿಕಾರ್ಜುನ ಖಾನಾಪೂರಿ, ಶಿವಾನಂದ ಮುನ್ನೋಳಿ, ಶಂಕರ ಪಾಟೀಲ, ಕೆಂಪಣ್ಣ ಶಿರಗಾಂವಕರ, ಇಂದುಮತಿ ಪಾಟೀಲ, ಕೆಂಪವ್ವ ಮಗದುಮ್ಮ, ಮಹಾದೇವಿ ಮುನ್ನೋಳಿ, ಮುಖಂಡರಾದ ಸುರೇಶ ತೇರಣಿ, ಆನಂದ ಸೋಮನ್ನವರ, ಸಿಇಒ ಕಾಡಪ್ಪ ನಿಡಸೋಸಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.