ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌ ಗಾಂಧಿ ಚಿತ್ರಗಳೆಲ್ಲ ಸತ್ಯವೆ?: ಸಿ.ಟಿ.ರವಿ ಪ್ರಶ್ನೆ

Published 2 ಮೇ 2024, 19:40 IST
Last Updated 2 ಮೇ 2024, 19:40 IST
ಅಕ್ಷರ ಗಾತ್ರ

ಬೆಳಗಾವಿ: ‘ಲೈಂಗಿಕ ದೌರ್ಜನ್ಯ ವಿಷಯದಲ್ಲಿ ಕಾಂಗ್ರೆಸ್‌ ಸರ್ಕಾರದ ನಡೆ ಅನುಮಾನಾಸ್ಪದವಾಗಿದೆ. ಅವರು ಹೇಳಿದ್ದೆಲ್ಲವೂ ಸತ್ಯ ಎಂಬಂತೆ ವಾದಿಸುತ್ತಾರೆ. ಹಾಗಾದರೆ, ರಾಹುಲ್‌ ಗಾಂಧಿ ಅವರ ಹಲವು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಅವುಗಳೆಲ್ಲ ಸತ್ಯ ಎಂದು ನಂಬೋಣವೇ?’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದರು.

‘ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣವನ್ನು ಬಿಜೆಪಿಗೆ ತಳಕು ಹಾಕಲಾಗುತ್ತಿದೆ. ರಾಹುಲ್‌ ಗಾಂಧಿ ಅಮೆರಿಕದಲ್ಲಿ ‘ಸಿಕ್ಕಿ ಹಾಕಿಕೊಂಡಿದ್ದರಂತೆ’ ಎಂಬ ಸುದ್ದಿ ಹರಿದಾಡಿತ್ತು. ರಜಾದಿನ ಕಳೆಯಲು ಅವರು ಒಬ್ಬೊಬ್ಬರ ಜೊತೆ ಅಪಘಾನಿಸ್ತಾನ, ಪಾಕಿಸ್ತಾನ, ನೇಪಾಳ, ಶ್ರೀಲಂಕಾ, ಸ್ವಿಟ್ಜರ್‌ಲ್ಯಾಂಡ್, ಇಟಲಿ ಮತ್ತಿತರ ಕಡೆ ಹೋಗುತ್ತಾರೆ ಎಂಬ ಆರೋಪವಿದೆ. ಅದೆಲ್ಲಸತ್ಯ ಎಂದು ನಂಬಬೇಕೆ ಎಂಬುದನ್ನು ಕಾಂಗ್ರೆಸ್ ಹೇಳಲಿ’ ಎಂದು ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

‘ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಮಹಿಳಾ ನ್ಯಾಯಾಧೀಶರ ನೇತೃತದಲ್ಲೇ ತನಿಖೆ ಮಾಡಿಸಬೇಕು. ಎಸ್‌ಐಟಿ ನ್ಯಾಯಾಧೀಶರಿಗೆ ವರದಿ ಸಲ್ಲಿಸಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು’ ಎಂದು ಅವರು ಆಗ್ರಹಿಸಿದರು.

‘ಪ್ರಜ್ವಲ್‌ ಏಪ್ರಿಲ್ 27ಕ್ಕೆ ವಿದೇಶಕ್ಕೆ ಹೋದರು. ಸರ್ಕಾರ ಏಪ್ರಿಲ್ 28ಕ್ಕೆ ಎಫ್‌ಐಆರ್‌ ದಾಖಲಿಸಿದೆ. ಮುಂಚಿತವಾಗಿ ಎಲ್ಲ ವಿಷಯ ಗೊತ್ತಿದ್ದರೂ ಏಕೆ ಕ್ರಮ ವಹಿಸಲಿಲ್ಲ? ಪ್ರಜ್ವಲ್‌ ಅವರನ್ನು ತಡೆಯಬೇಡಿ ಎಂದು ಯಾರಾದರೂ ಒತ್ತಡ ಹೇರಿದ್ದರೇ? ನೀವೇಕೆ ಅವರನ್ನು ಹೋಗಲು ಬಿಟ್ಟಿರಿ? ಸಂತ್ರಸ್ತೆ ಒಬ್ಬರು ದೂರು ನೀಡಿದ್ದಾರೆ. ಆ ಎಫ್‌ಐಆರ್‌ ಕೂಡ ದುರ್ಬಲ ಆಗಿದೆ ಎಂಬ ವಿಚಾರ ಈಗ ಹೊರಗೆ ಬಂದಿದೆ. ಎಫ್‌ಐಆರ್‌ ಮಾಡಿದ್ದು ಕಾಂಗ್ರೆಸ್ ಸರ್ಕಾರ. ಚುನಾವಣೆ ಮುಗಿದ ಬಳಿಕ ಈ ಪ್ರಕರಣವೇ ಮಾಯ ಆಗಬಹುದು’ ಎಂದೂ ಹೇಳಿದರು.

‘ಪೆನ್‌ಡ್ರೈವ್‌ನ ಎಲ್ಲ ಪ್ರಕರಣಗಳು 4–5 ವರ್ಷ ಹಿಂದಿನವು. ಆಗ ಜೆಡಿಎಸ್‌ ಪಕ್ಷವು ಕಾಂಗ್ರೆಸ್‌ನ ಭಾಗವಾಗಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT