ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ: ನಾಗರಿಕ ಕುಂದುಕೊರತೆ

Last Updated 19 ಜನವರಿ 2022, 8:08 IST
ಅಕ್ಷರ ಗಾತ್ರ

ಮೂಲಸೌಲಭ್ಯಗಳನ್ನು ಕಲ್ಪಿಸಿ

ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಹಲಗತ್ತಿ ಗ್ರಾಮದಲ್ಲಿ ಗಂಗರೆಡ್ಡಿ ಫ್ಲಾಟ್ ಮೂಲಸೌಲಭ್ಯಗಳ ಕೊರತೆಯಿಂದ ನಲುಗುತ್ತಿದೆ.

ಸಮರ್ಪಕ ರಸ್ತೆಗಳಿಲ್ಲ. ಮಳೆಗಾಲದಲ್ಲಂತೂ ಕೆಸರು ಗದ್ದೆಗಳಂತಾಗುತ್ತವೆ. ಗುಂಡಿಗಳು ಉಂಟಾಗಿದ್ದು, ಜನರ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಹಲವೆಡೆ ಹೊಸ ಕಟ್ಟಡಗಳ ಕಾಮಗಾರಿ ಶುರು ಆಗಿರುವುದರಿಂದಾಗಿ ಟ್ರ್ಯಾಕ್ಟರ್‌ ಮೊದಲಾದ ವಾಹನಗಳು ಸಂಚರಿಸುತ್ತಿರುವುದರಿಂದ ರಸ್ತೆಗಳು ಮತ್ತಷ್ಟು ಹಾಳಾಗಿವೆ. ಗ್ರಾಮ ಪಂಚಾಯ್ತಿಯವರು ಇತ್ತ ಗಮನಹರಿಸಿ, ಸಿ.ಸಿ. ರಸ್ತೆ ನಿರ್ಮಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು. ಚರಂಡಿ ವ್ಯವಸ್ಥೆಯನ್ನೂ ಸುಧಾರಿಸಬೇಕು. ಮೂಲಸೌಲಭ್ಯಗಳನ್ನು ಒದಗಿಸಲು ತ್ವರಿತವಾಗಿ ಕ್ರಮ ಕೈಗೊಳ್ಳಬೇಕು.

– ಬಸಪ್ಪ ಸೊ. ಮುಳ್ಳೂರ, ಹಣಮಂತ ಗಂಗರಡ್ಡಿ, ಶಿವಾನಂದ ಚಂಡಿಕಿ, ನಿವಾಸಿಗಳು, ಹಲಗತ್ತಿ

ಶೌಚಾಲಯಗಳಿಗೆ ನೀರು ಪೂರೈಸಿ

ಮೂಡಲಗಿ: ಇಲ್ಲಿನ ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಗುರ್ಲಾಪುರ ಗ್ರಾಮವು ಪುರಸಭೆಯ ಅಧಿಕಾರಿಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳಿಂದ ನಿರ್ಲಕ್ಷಕ್ಕೆ ಒಳಗಾಗಿದೆ. ಗ್ರಾಮದ ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿರುವ ಶೌಚಾಲಯದ ಕೊಳವೆಬಾವಿಯ ನೀರೆತ್ತುವ ಯಂತ್ರವು ಕೆಟ್ಟು ಹಲವು ಕಳೆದಿದ್ದರೂ ದುರಸ್ತಿ ಮಾಡುವ ಬಗ್ಗೆ ಕಾಳಜಿ ಇಲ್ಲವಾಗಿದೆ. ಇದರಿಂದ ಜನರು ನಿತ್ಯ ಪರದಾಡುವಂತಾಗಿದೆ. ಗುರ್ಲಾಪುರ ಕ್ರಾಸ್‌ನ ಬಸ್ ನಿಲ್ದಾಣದ ಬಳಿಯಲ್ಲಿ ಕಳೆದ ವರ್ಷ ನಿರ್ಮಿಸಿರುವ ಶೌಚಾಲಯಕ್ಕೆ ನೀರಿನ ಸೌಲಭ್ಯ ಕಲ್ಪಿಸದೆ ಇರುವುದರಿಂದ ಅದನ್ನು ಬಳಕೆ ಮಾಡದಂತಾಗಿದೆ. ಶೌಚಾಲಯಕ್ಕೆ ಬೇಗ ನೀರಿನ ವ್ಯವಸ್ಥೆ ಕಲ್ಪಿಸಬೇಕು.

– ನಿವಾಸಿಗಳು, ಗುರ್ಲಾಪುರ

₹10 ಸ್ವೀಕರಿಸುವಂತೆ ಮಾಡಿ

ಖಾನಾಪುರ: ವ್ಯಾಪಾರಿಗಳು, ಗ್ರಾಹಕರು, ಬ್ಯಾಂಕ್ ಅಧಿಕಾರಿಗಳು ಮತ್ತು ಸಾರ್ವಜನಿಕರು ₹ 10 ನಾಣ್ಯ ಸ್ವೀಕರಿಸಲು ನಿರಾಕರಿಸುತ್ತಿದ್ದಾರೆ. ಈ ಕಾರಣ ಅಂತಹ ನಾಣ್ಯಗಳನ್ನು ಹೊಂದಿದವರಿಗೆ ಚಲಾವಣೆಯಾಗದೆ ತೊಂದರೆಯಾಗುತ್ತಿದೆ. ನೆರೆಯ ಮಹಾರಾಷ್ಟ್ರ, ಗೋವಾ ಸೇರಿದಂತೆ ಎಲ್ಲ ಕಡೆಗಳಲ್ಲಿ ಆ ಣ್ಯಗಳು ಚಲಾವಣೆಯಲ್ಲಿವೆ. ಗಡಿ ಭಾಗದಲ್ಲಿ ಮಾತ್ರ ಈ ನಾಣ್ಯಗಳ ವಿನಿಮಯಕ್ಕೆ ಹಿಂದೇಟು ಹಾಕಲಾಗುತ್ತಿದೆ. ಕೂಡಲೇ ಈ ವಿಷಯವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ನಾಣ್ಯಗಳ ಚಲಾವಣೆ ಕುರಿತಂತೆ ಗ್ರಾಹಕರಿಗೆ ತಿಳಿವಳಿಕೆ ಮತ್ತು ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಬೇಕು.

-ಜಯಪ್ರಕಾಶ ಬಾಳಕಟ್ಟಿ, ನಿವೃತ್ತ ಬ್ಯಾಂಕ್ ಅಧಿಕಾರಿ, ಖಾನಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT