ಶುಕ್ರವಾರ, ಡಿಸೆಂಬರ್ 13, 2019
24 °C

ಮಹಾಲಕ್ಷ್ಮಿಗೆ ವಜ್ರಖಚಿತ ಹಾರ ಸಮರ್ಪಿಸಿದ ಲಕ್ಷ್ಮಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಮಹಾರಾಷ್ಟ್ರದ ಕೊಲ್ಹಾಪುರ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ದೇವಸ್ಥಾನಕ್ಕೆ ಚಿನ್ನದ ಹಾರ ಸಮರ್ಪಿಸಿದ್ದಾರೆ. ಕುಟುಂಬ ಸಮೇತ ತೆರಳಿ ಪೂಜೆ ಸಲ್ಲಿಸಿದ ಅವರು, 205 ಗ್ರಾಂ. ತೂಕದ ಚಿನ್ನ, ವಜ್ರ ಇರುವ ಹಾರ ಅರ್ಪಿಸಿದ್ದಾರೆ.

ಸಹೋದರ ಚನ್ನರಾಜ್ ಹಟ್ಟಿಹೊಳಿ, ಪುತ್ರ ಮೃಣಾಲ್, ಕುಟುಂಬದವರು ಹಾಗೂ ಆಪ್ತರೊಂದಿಗೆ ದೇವಸ್ಥಾನಕ್ಕೆ ಹೋಗಿದ್ದರು. ದೇವಿಗೆ ದುಬಾರಿ ಹಾರ ಸಮರ್ಪಿಸಿದ ಅವರನ್ನು ದೇವಸ್ಥಾನ ಸಮಿತಿಯವರು ಸನ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.

ಪ್ರತಿಕ್ರಿಯಿಸಿ (+)