ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲ ದಾಖಲಾತಿ ಪರಿಶೀಲನೆ ಆರಂಭ

Last Updated 6 ಜೂನ್ 2019, 14:25 IST
ಅಕ್ಷರ ಗಾತ್ರ

ಬೆಳಗಾವಿ: ಪದವಿಪೂರ್ವ ಶಿಕ್ಷಣ ಇಲಾಖೆ ವತಿಯಿಂದ, ಪ್ರಥಮ ವರ್ಷದ ವೃತ್ತಿಪರ ಶಿಕ್ಷಣ ಕೋರ್ಸ್‌ಗಳ ಪ್ರವೇಶಾತಿಗಾಗಿ ನಡೆಯುವ ಮೂಲ ದಾಖಲಾತಿ ಪರಿಶೀಲನಾ ಪ್ರಕ್ರಿಯೆಗೆ ಇಲ್ಲಿನ ಅಂಗಡಿ ತಾಂತ್ರಿಕ ಕಾಲೇಜಿನಲ್ಲಿ ಗುರುವಾರ ಚಾಲನೆ ನೀಡಲಾಯಿತು.

ಇಲಾಖೆಯ ಪ್ರಭಾರ ಉಪನಿರ್ದೇಶಕ ಎಸ್.ಎಂ. ಕಾಪಸಿ ಚಾಲನೆ ನೀಡಿ ಮಾತನಾಡಿ, ‘ವಿದ್ಯಾರ್ಥಿಗಳು ಪ್ರಕ್ರಿಯೆಯಲ್ಲಿ ಪಾಲ್ಗೊಂಡು ತಮ್ಮ ಅಭಿರುಚಿಗೆ ತಕ್ಕಂ ಕೋರ್ಸ್‌ ಆಯ್ಕೆ ಮಾಡಿಕೊಳ್ಳಬೇಕು’ ಎಂದರು.

ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಮತ್ತು ಅವರ ಪಾಲಕರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು.

ಕೇಂದ್ರದ ನೋಡಲ್ ಅಧಿಕಾರಿ ಆರ್.ಎಸ್. ಬಸಣ್ಣವರ ಪ್ರಕ್ರಿಯೆಯ ಬಗ್ಗೆ ಮಾರ್ಗದರ್ಶನ ನೀಡಿದರು. ಉಪ ನೋಡಲ್ ಅಧಿಕಾರಿ ಮಹೇಶ ಡೊಳ್ಳಿನ, ದಾಖಲಾತಿ ಪರಿಶೀಲನಾ ಅಧಿಕಾರಿಗಳಾದ ಅನಸೂಯಾ ಹಿರೇಮಠ, ಬಿ.ಜಿ. ತುಳಸಿಗೆರಿ, ಬಿ.ಎಸ್. ಮುರಗೋಡ, ಕಾಲೇಜಿನ ಆಡಳಿತಾಧಿಕಾರಿ ರಾಜು ಜೋಶಿ, ಪ್ರಾಚಾರ್ಯ ಡಾ.ಸಂಜಯ ಪೂಜಾರಿ, ಪ್ರೊ.ಕಿರಣ ಪೋತದಾರ, ಸಂತೋಷ ರಾವಳುಚೆ, ಸುಶಾಂತ ಪುರಾಣಿಕಮಠ, ಸುರೇಶ ಕಮತೆ, ಪ್ರೊ.ಮಂಜುನಾಥ ಪಾಟೀಲ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT