ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾದವರಿಗೆ ಹವ್ಯಕ ಮಂಡಳದಿಂದ ₹1.51 ಲಕ್ಷ ದೇಣಿಗೆ

Last Updated 8 ಜೂನ್ 2021, 13:27 IST
ಅಕ್ಷರ ಗಾತ್ರ

ಬೆಳಗಾವಿ: ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾದವರಿಗೆ ನೆರವಾಗುವ ನಿಟ್ಟಿನಲ್ಲಿ ವಿಶ್ವ ಹಿಂದೂ ಪರಿಷತ್, ಸೇವಾಭಾರತಿ ಹಾಗೂ ಬಜರಂಗ ದಳ ಸಂಯುಕ್ತವಾಗಿ ನಡೆಸುತ್ತಿರುವ ಸೇವಾ ಕೇಂದ್ರಕ್ಕೆ ಇಲ್ಲಿನ ಹವ್ಯಕ ಮಂಡಳದ ಪ್ರಮುಖರು ₹ 1.51 ಲಕ್ಷ ದೇಣಿಗೆ ನೀಡಿದರು.

ಕೋವಿಡ್ ಮೊದಲನೇ ಅಲೆಯ ಸಂದರ್ಭದಲ್ಲಿ ಸಮಾಜದವರು ₹ 3 ಲಕ್ಷ ವಂತಿಗೆಯನ್ನು ಸೇವಾಭಾರತಿ ಸಂಸ್ಥೆ ಮೂಲಕ ನೀಡಿದ್ದರು. ಈ ಬಾರಿ ಜನರಿಗೆ ನೆರವಾಗುತ್ತಿರುವ ಸೇವಾ ಕೇಂದ್ರಕ್ಕೆ ಸಹಾಯ ಮಾಡಿದ್ದಾರೆ.

ಹವ್ಯಕ ಮಂಡಳದ ಪ್ರಮುಖರಾದ ಭಾಸ್ಕರ್ ಕಡೇಕೋಡಿ, ಶಾಂತಾ ಹೆಗಡೆ, ಅನಂತ ಹೆಗಡೆ, ಸೇವಾಭಾರತಿ ನಗರ ಸಂಯೋಜಕ ರೋಹಿತ್ ದೇಶಪಾಂಡೆ, ಆರ್‌ಎಸ್‌ಎಸ್ ನಗರ ಸಂಪರ್ಕ ಪ್ರಮುಖ ಗುರುದತ್ತ ಕುಲಕರ್ಣಿ, ವಿಎಚ್‌ಪಿ ಸಹ ಕೋಶಾಧ್ಯಕ್ಷ ಕೃಷ್ಣ ಭಟ್, ವಿದ್ಯಾಭಾರತಿ ಪ್ರಾಂತ ಅಧ್ಯಕ್ಷ ಪರಮೇಶ್ವರ ಹೆಗಡೆ, ವಿಎಚ್‌ಪಿ ವಿಭಾಗ ಸಹ ಕಾರ್ಯದರ್ಶಿ ಅಚ್ಯುತ ಕುಲಕರ್ಣಿ, ನಗರ ಘಟಕದ ಅಧ್ಯಕ್ಷ ಡಾ.ಭಾಗೋಜಿ, ಜಿಲ್ಲಾ ಘಟಕದ ಕಾರ್ಯದರ್ಶಿ ವಿಜಯ ಜಾಧವ, ಬಜರಂಗ ದಳದ ನಗರ ಸಂಯೋಜಕ ಆದಿನಾಥ ಗಾವಡೆ ಹಾಗೂ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT