ಭಾನುವಾರ, ಜೂನ್ 20, 2021
28 °C

ಮಲಪ್ರಭಾ ಜಲಾಶಯ ಭರ್ತಿಯಾಗದೇ ನೀರು ಬಿಡುಗಡೆ ಬೇಡ: ಕೋನರಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ‘ಸವದತ್ತಿ ತಾಲ್ಲೂಕಿನ ಮಲಪ್ರಭಾ (ನವಿಲುತೀರ್ಥ) ಜಲಾಶಯ ಭರ್ತಿಯಾಗುವ ಮುನ್ನವೇ ನದಿಗೆ ನೀರು ಹರಿಸಬಾರದು’ ಎಂದು ಒತ್ತಾಯಿಸಿ ಜೆಡಿಎಸ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎನ್.ಎಚ್. ಕೋನರಡ್ಡಿ ಇಲ್ಲಿ ಪ್ರಾದೇಶಿಕ ಆಯುಕ್ತರ ಕಚೇರಿ ಮತ್ತು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

‘ಜಲಾಶಯ ತುಂಬದೆ ನೀರು ಹೊರಬಿಡುವುದು ತಪ್ಪು. ಹೆಚ್ಚಿನ ಮಳೆ ಬಂದರೆ ತೊಂದರೆ ಆಗಬಹುದೆಂದು ಭಾವಿಸಿ ನೀರು ಬಿಡುಗಡೆ ಮಾಡಿತ್ತಿದ್ದೀರಿ. ಬೆಳಗಾವಿ, ಧಾರವಾಡ, ಗದಗ ಹಾಗೂ ಬಾಗಲಕೋಟೆ ಜಿಲ್ಲೆಯ ನರಗುಂದ, ನವಲಗುಂದ, ಅಣ್ಣಿಗೇರಿ, ಹುಬ್ಬಳ್ಳಿ, ಬೈಲಹೊಂಗಲ, ಬದಾಮಿ, ರಾಮದುರ್ಗ, ಖಾನಾಪುರ, ರೋಣ, ಗದಗ, ಗುಳೇದಗುಡ್ಡ, ಹುನುಗುಂದ ಭಾಗದ ಕುಡಿಯುವ ಉದ್ದೇಶಕ್ಕಾಗಿ ಹಾಗೂ ನೀರಾವರಿಗೆ ಇಟ್ಟುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಮುಖಂಡ ಧರ್ಮರಾಜ್‌ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.