ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉಪ್ಪಾರ ಸಮುದಾಯವರಿಗೆ ಅಧಿಕಾರ ನೀಡಿ’

Published 6 ಜೂನ್ 2023, 12:44 IST
Last Updated 6 ಜೂನ್ 2023, 12:44 IST
ಅಕ್ಷರ ಗಾತ್ರ

ಮೂಡಲಗಿ: ‘ಕರ್ನಾಟಕದಲ್ಲಿ 50 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಹೊಂದಿದ ಉಪ್ಪಾರ ಸಮುದಾಯವು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ  ಹಿಂದುಳಿದಿದೆ. ಈ ಸಮಾಜಕ್ಕೆ ಯಾವುದೇ ರಾಜಕೀಯ ಪಕ್ಷಗಳು ಅಥವಾ ಸರ್ಕಾರವು ರಾಜಕೀಯ ಅಧಿಕಾರ ನೀಡಿ, ಮುಂಚೂಣಿಗೆ ತರುವ ಪ್ರಯತ್ನ ಮಾಡಿಲ್ಲ. ಈಗಿನ ಕಾಂಗ್ರೆಸ್ ಸರ್ಕಾರ ಉಪ್ಪಾರ ಸಮಾಜಕ್ಕೆ ರಾಜಕೀಯ ಸ್ಥಾನ ಮಾನ ನೀಡಿ ಮುನ್ನೆಲೆಗೆ ತರಬೇಕು’ ಎಂದು ಕರ್ನಾಟಕ ಉಪ್ಪಾರ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ವಿಷ್ಣು ಲಾತೂರ, ಉಪಾಧ್ಯಕ್ಷ ಅರುಣ ಸವತಿಕಾಯಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಸರ್ಕಾರವು ಚಾಮರಾಜ ನಗರದ ಮುಟ್ಟರಂಗಶೆಟ್ಟ ಇವರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಅವಕಾಶ ನೀಡಿ ಅವರ ಗೆಲುವಿಗೆ ಸಹಕರಿಸಿದೆ. ಕರ್ನಾಟಕ ರಾಜ್ಯದ ಇಡೀ ಉಪ್ಪಾರ ಸಮುದಾಯದಲ್ಲಿ ಕೇವಲ ಒಬ್ಬರೇ ಶಾಸಕರಿದ್ದು, ಅವರಿಗೂ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡದೆ, ವಂಚಿತರನ್ನಾಗಿ ಮಾಡಲಾಗಿದೆ. ವಿಧಾನಪರಿಷತ್ ಸ್ಥಾನಗಳ ಪೈಕಿ ಒಂದು ವಿಧಾನ ಪರಿಷತ್ ಸ್ಥಾನವನ್ನು ಕರ್ನಾಟಕ ಉಪ್ಪಾರ ಸಂಘದ ಮಾಜಿ ಅಧ್ಯಕ್ಷ, ಹಿಂದುಳಿದ ವರ್ಗಗಳ ಕೆಪಿಸಿಸಿ ಉಪಾಧ್ಯಕ್ಷ ವಕೀಲ ಸುರೇಶ ಲಾತೂರ್‌ ಅವರಿಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT