ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ ಲೈವಲ್ಲಿ ‘ವಚನ ಸಾರ’

Last Updated 26 ಏಪ್ರಿಲ್ 2020, 13:00 IST
ಅಕ್ಷರ ಗಾತ್ರ

ಬೆಳಗಾವಿ: ಅಥಣಿಯ ವಕೀಲ ಭೀಮನಗೌಡ ಪರಗೊಂಡ ಸಂಯೋಜನೆಯಲ್ಲಿ ಸಮಾನ ಮನಸ್ಕರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ವೇದಿಕೆ ಬಳಸಿಕೊಂಡು ಬಸವ ಜಯಂತಿಯನ್ನು ಭಾನುವಾರ ಅರ್ಥಪೂರ್ಣ ಹಾಗೂ ವಿಶೇಷವಾಗಿ ಆಚರಿಸಿದರು. ವಚನಗಳು ಮತ್ತು ವಚನಕಾರರ ಸಂದೇಶವನ್ನು ಸಾರಿದರು.

ಫೇಸ್‌ಬುಕ್‌ ಲೈವ್‌ ಕಾರ್ಯಕ್ರಮದ ಆಶಯ, ಗುರಿ, ಉದ್ದೇಶ ಮತ್ತು ಶರಣರ ಬಗ್ಗೆ ಬೀಮನಗೌಡ ವಿವರಿಸಿದರು. ಬಳಿಕ ವಿಜಯಪುರ ಬಿಎಲ್‌ಡಿ ಸಂಸ್ಥೆಯ ಪ್ರಚಾರ ಅಧಿಕಾರಿ ಮಹಾಂತೇಶ ಬಿರಾದಾರ ಮಾತನಾಡಿದರು. ಕಲಬುರ್ಗಿ ಜಿಲ್ಲೆ ಪತ್ರಕರ್ತ ಶಿವರಂಜನ್‌ ಸತ್ಯಂಪೇಟ, ‘ಬಸವಣ್ಣ ಲೋಕ ಸೂರ್ಯ. ಸೂರ್ಯ ಇರುವಲ್ಲಿ ಕತ್ತಲೆ ಹೇಗೆ ತನಗೆ ತಾನೆ ಕಾಲ್ತೆಗೆಯುವುದೋ ಹಾಗೆ ಬಸವಣ್ಣ ಇರುವಲ್ಲಿ ಜಾತಿ ಸೂತಕ ಇಲ್ಲ. ಮತ ಮೌಢ್ಯಗಳಿಲ್ಲ. ಮೇಲು-ಕೀಳುಗಳಿಲ್ಲ. ಬಡವ-ಬಲ್ಲಿದನಿಲ್ಲ, ಜಾಣ-ದಡ್ಡನಿಲ್ಲ, ಸ್ತ್ರೀ-ಪುರುಷ ಎಂಬ ತಾರತಮ್ಯವಿಲ್ಲ. ಲಂಚ–ವಂಚನೆಗಳಿಲ್ಲ, ದರ್ಪ-ದಬ್ಬಾಳಿಕೆ ಇಲ್ಲ. ಇಲ್ಲಿ ಸರ್ವರಿಗೂ ಸಮಬಾಳು; ಸರ್ವರಿಗೂ ಸಮಪಾಲು’ ಎಂದರು.

ರಾಷ್ಟ್ರೀಯ ಬಸವ ಸೇನೆ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ರವಿ ಬಿರಾದಾರ, ಕಲಬುರ್ಗಿಯ ಬಸವರಾಜ ಕೋಣಿನ್ ಸಿರನೂರ ಮತ್ತು ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಆನಂದ ಏಣಗಿ, ಅಥಣಿಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದಾರ್ಥ ಶಿಂಗೆ, ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ವಿಲಾಸ ಗೌತಮ್ ನಿಡಗುಂದಿ, ಧಾರವಾಡದ ಶರಣಪ್ಪ ಗೊಲ್ಲರ ಭಾಗವಹಿಸಿ ತಮ್ಮ ವಿಷಯಗಳನ್ನು ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT