ಬುಧವಾರ, ಡಿಸೆಂಬರ್ 8, 2021
27 °C

ಬಸವರಾಜ, ಸಿದ್ದುಗೆ ಸತ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಅದ್ಭುತ ಸ್ಮರಣ ಶಕ್ತಿಗೆ ಹೆಸರಾಗಿರುವ ‘ನಡೆದಾಡುವ ಗಣಕ ಯಂತ್ರ’ ಎಂದೇ ಖ್ಯಾತರಾದ ಅಥಣಿ ತಾಲ್ಲೂಕಿನ ಬಸವರಾಜ ಉಮರಾಣಿ ಅವರನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಭಾನುವಾರ ಇಲ್ಲಿ ಸತ್ಕರಿಸಿದರು.

‘ಅವರು ದೃಷ್ಟಿದೋಷ ಹೊಂದಿದ್ದರೂ ತಮ್ಮ ಅತ್ಯುನ್ನತ ಬುದ್ದಿ ಸಂಪಾದನೆಯೊಂದಿಗೆ ಹಲವು ರಾಜ್ಯ, ರಾಷ್ಟ್ರೀಯ ಹಾಗೂ ಹೊರ ದೇಶಗಳಲ್ಲೂ ಪ್ರತಿಭೆ ಅನಾವರಣಗೊಳಿಸಿದ್ದಾರೆ. ದುಬೈಗೆ ಹೋಗಿ ಅಲ್ಲಿನ ರಾಜ ಶೇಖ್ ಮೊಹಮ್ಮದ್ ಅವರ ಮುಂದೆ ಪ್ರತಿಭೆ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದು ಹೆಮ್ಮೆಯ ವಿಷಯ’ ಎಂದರು.

ಕಲಾವಿದ ಸಿದ್ದು ಇಟಗಿ ಕೂಡ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಹೆಬ್ಬಾಳಕರ್ ಜನ್ಮ ದಿನಾಂಕದ ಮೂಲಕ ಕೆಲವೇ ಕ್ಷಣಗಳಲ್ಲಿ ಅವರ ಭಾವಚಿತ್ರ ರಚಿಸಿ ವಿಸ್ಮಯ ಮೂಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.