ಬುಧವಾರ, ಅಕ್ಟೋಬರ್ 20, 2021
28 °C

ಮೊಹಮ್ಮದ್, ಆಕಾಶ್‌ಗೆ ಸನ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ನಗರದ ಕೆಎಲ್‌ಇ ಸಂಸ್ಥೆಯ ರಾಜಾಲಖಮಗೌಡ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ಮೂವರು ವಿದ್ಯಾರ್ಥಿಗಳು ಸಿಇಟಿ ಹಾಗೂ ಜೆಇಇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಅವರನ್ನು ಮಂಗಳವಾರ ಸನ್ಮಾನಿಸಲಾಯಿತು.

ಮೊಹಮ್ಮದ್ ಕೈಫ್‌ ಮುಲ್ಲಾ ಸಿಇಟಿ ಪರೀಕ್ಷೆಯಲ್ಲಿ ಪಶು ವೈದ್ಯಕೀಯದಲ್ಲಿ 5ನೇ, ಕೃಷಿ ವಿಜ್ಞಾನದಲ್ಲಿ 15ನೇ ಮತ್ತು ಎಂಜಿನಿಯರಿಂಗ್‌ನಲ್ಲಿ 119ನೇ
ರ‍್ಯಾಂಕ್ ಮತ್ತು ರಾಷ್ಟ್ರಮಟ್ಟದ ಜೆಇಇ ಪರೀಕ್ಷೆಯಲ್ಲಿ ಶೇ 99ರಷ್ಟು ಅಂಕ ಪಡೆದು ರಾಷ್ಟ್ರಕ್ಕೆ 10,110ನೇ ರ‍್ಯಾಂಕ್‌ ಗಳಿಸಿದ್ದಾರೆ.

ಆಕಾಶ ಬಡದಾನಿ ಸಿಇಟಿಯಲ್ಲಿ ಕೃಷಿ ವಿಜ್ಞಾನದಲ್ಲಿ 1,086ನೇ ರ‍್ಯಾಂಕ್, ಎಂಜಿನಿಯರಿಂಗ್‌ನಲ್ಲಿ 1,409ನೇ ರ‍್ಯಾಂಕ್, ಪಶುವೈದ್ಯಕೀಯದಲ್ಲಿ 3,350ನೇ ರ‍್ಯಾಂಕ್ ಮತ್ತು ಜೆಇಇ ಪರೀಕ್ಷೆಯಲ್ಲಿ ಶೇ 90.02ರಷ್ಟು ಅಂಕ ಗಳಿಸಿ 87,217ನೇ ರ‍್ಯಾಂಕ್‌ ಪಡೆದಿದ್ದಾರೆ.

ಸೊಹಮ್ ಚಿಪ್ರೆ ಸಿಇಟಿಯಲ್ಲಿ ಕೃಷಿ ವಿಜ್ಞಾನದಲ್ಲಿ 519, ಎಂಜಿನಿಯರಿಂಗ್‌ನಲ್ಲಿ 1,660, ಪಶುವೈದ್ಯಕೀಯದಲ್ಲಿ 1,256ನೇ ರ‍್ಯಾಂಕ್ ಗಳಿಸಿದ್ದಾರೆ. ಈ ವಿದ್ಯಾರ್ಥಿಗಳನ್ನು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ನಿರ್ದೇಶಕರು, ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರು ಮತ್ತು ಸದಸ್ಯರು, ಆಜೀವ ಸದಸ್ಯ ಎಸ್.ಜಿ. ನಂಜಪ್ಪನವರ, ಪ್ರಾಚಾರ್ಯ ವಿಶ್ವನಾಥ ಕಾಮಗೋಳ ಅಭಿನಂದಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.