ಬುಧವಾರ, ಮಾರ್ಚ್ 29, 2023
31 °C

ಗೋವನ್ನು ಪೂಜಿಸಬೇಕು, ಸಂರಕ್ಷಿಸಬೇಕು: ಆನಂದ ಮಾಮನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಗರಗೋಳ: ‘ನಾವೆಲ್ಲರೂ ಗೋವನ್ನು ಪೂಜಿಸಿ ನಮ್ಮ ಧಾರ್ಮಿಕ ಪರಂಪರೆ ಮುಂದುವರಿಸಿಕೊಂಡು ಹೋಗಬೇಕು’ ಎಂದು ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷರೂ ಆಗಿರುವ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಹೇಳಿದರು.

ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಮುಜರಾಯಿ ಇಲಾಖೆ, ಪಶುಸಂಗೋಪನಾ ಇಲಾಖೆ ಹಾಗೂ ತಾಲ್ಲೂಕು ಆಡಳಿತದಿಂದ ದೀಪಾವಳಿ ಬಲಿಪಾಡ್ಯಮಿ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಗೋಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ರೈತರಿಗೆ ಗೋವು ಆಧಾರವಾಗಿವೆ. ಗೋವಿನ ಸಗಣಿ, ಗಂಜಲದಿಂದ ಭೂಮಿ ಫಲವತ್ತತೆಯೂ ಹೆಚ್ಚುತ್ತದೆ. ಆದ್ದರಿಂದ ಅವುಗಳ ರಕ್ಷಣೆಗಾಗಿ ಎಲ್ಲರೂ ಶ್ರಮಿಸಬೇಕು’ ಎಂದರು.

ಇದೇ ವೇಳೆ ದೇವಸ್ಥಾನದಲ್ಲಿ ಕಾರ್ತೀಕೋತ್ಸವಕ್ಕೂ ಚಾಲನೆ ನೀಡಿದರು.

ಯಲ್ಲಮ್ಮ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಕೊಳ್ಳಪ್ಪಗೌಡ ಗಂದಿಗವಾಡ, ಲಕ್ಷ್ಮಿ ಹೂಲಿ, ವೈ.ವೈ. ಕಾಳಪ್ಪನವರ, ರಾಮದುರ್ಗ ಡಿವೈಎಸ್‌ಪಿ ರಾಮನಗೌಡ ಹಟ್ಟಿ, ಗ್ರೇಡ್-2 ತಹಶೀಲ್ದಾರ್‌ ಗುಂಡಪ್ಪಗೊಳ, ದೇವಸ್ಥಾನದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ ಮಾಳಗೆ, ಎಂಜಿನಿಯರ್ ಎಂ.ವಿ. ಮುಳ್ಳೂರ, ಸಿಪಿಐ ಮಂಜುನಾಥ ನಡುವಿನಮನಿ, ಕಿರಣ ಶಿಂಧೆ, ಕಿರಣ ಮಹೇಂದ್ರಕರ, ವಿನಯ ಮಹೇಂದ್ರಕರ, ಸುರೇಶ ಗಾಣಿಗೇರ, ಡಾ.ಪ್ರಮೋದ ಮೂಡಲಗಿ, ಡಾ.ಅನಿಲ ಮರಲಿಂಗನವರ, ಬಸಪ್ಪ ಸಿದ್ದಕ್ಕನವರ, ಎಸ್.ಎಸ್. ಒಣಕಿ, ರಾಜು ಬೆಳವಡಿ, ವಿ.ಪಿ. ಸೊನ್ನದ, ಪಂಡಿತ ಯಡೂರಯ್ಯ, ಪಂಡಿತ ರಾಜಶೇಖರಯ್ಯ, ವಿಶ್ವನಾಥಗೌಡ ಲಿಂಗಋಷಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು