ಅಥಣಿ: ಗೋವು ಪೂಜಿಸುವ ಮನೆ ಗೋಪುರದಂತೆ ಬೆಳೆಯುತ್ತದೆ -ಆರ್‌ಎಸ್‌ಎಸ್

ಅಥಣಿ: ‘ಗೋವುಗಳನ್ನು ಪೂಜಿಸುವ ಮನೆಗಳು ಗೋಪುರದಂತೆ ಬೆಳೆಯುತ್ತಾ ಹೋಗುತ್ತವೆ. ಅಭಿವೃದ್ಧಿ ಸಾಧಿಸುತ್ತವೆ’ ಎಂದು ಆರ್‌ಎಸ್‌ಎಸ್ ಚಿಕ್ಕೋಡಿ ಕಾರ್ಯವಾಹ ಮಹಾಂತೇಶ ಗುಡ್ಡಾಪುರ ಹೇಳಿದರು.
ತಾಲ್ಲೂಕಿನ ಸತ್ತಿ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಗೋವಿಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.
‘ಭಾರತಿಯ ಸಂಸ್ಕೃತಿಯಲ್ಲಿ ಗೋವುಗಳಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಅವುಗಳನ್ನು ಪೂಜಿಸುವುದರಿಂದ ದೇವಾನುದೇವತೆಗಳ ಅನುಗ್ರಹಕ್ಕೆ ಪಾತ್ರರಾಗುತ್ತೇವೆ. ದೇಶಿ ಗೋವುಗಳನ್ನು ಮುಂದಿನ ಪೀಳಿಗೆಗಳಿಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರದಾಗಿದೆ’ ಎಂದರು.
‘ಗೋವುಗಳ ಸಗಣಿ ಹಾಗೂ ಗಂಜಲದಲ್ಲಿ ಔಷಧೀಯ ಗುಣಗಳಿವೆ. ಹಾಲು ಮತ್ತು ಹಾಲಿನ ಉತ್ಪನ್ನಗಳು ಸೇವಿಸಿದವರ ಆರೋಗ್ಯ ಕಾಪಾಡುತ್ತವೆ. ರೋಗ ನಿರೋಧಕ ಶಕ್ತಿ ವೃದ್ಧಿಸುತ್ತವೆ. ಇದೆಲ್ಲ ಕಾರಣಗಳಿಂದಾಗಿ ಮನೆಗೊಂದು ಗೋವು ಇರಬೇಕು’ ಎಂದು ಹೇಳಿದರು.
ಮುಖಂಡರಾದ ಕಾಕಾಸಾಬ ಪಾಟೀಲ, ಚಂದ್ರಶೇಖರ ಬಿರಾದರ, ಶ್ರೀರಾಮ ಕುಲಕರ್ಣಿ, ಪ್ರಭುಲಿಂಗ ಕುಂಬಾರ, ಮಲ್ಲಪ್ಪ ಹಂಚಿನಾಳ, ಅಣ್ಣಪ್ಪ ರುದ್ರಗೌಡರ, ಚೇತನ ಭೂಷಣ್ಣವರ, ಉಮೇಶ ಶೇಗುಣಸಿ, ಶ್ರೀಶೈಲ ಜಕ್ಕಪ್ಪನವರ, ಗ್ರಾ.ಪಂ. ಸದಸ್ಯ ಪ್ರಕಾಶ ಗುಡ್ಡಾಪುರ, ಸಂಗಮೇಶ ಯಲಗೋಣ, ಶ್ರೀಶೈಲ ಬ್ಯಾಳಗೌಡರ, ಅಶೋಕ ಬಾಗೋಜಿ, ರಾಜು ಗಂಗಪ್ಪನವರ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.