ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒಬಿಒಆರ್: ಸಾರ್ವಭೌಮತ್ವ ಗೌರವಿಸಿ’

Last Updated 24 ಮೇ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಚೀನಾದ ‘ಒಂದು ವಲಯ ಒಂದು ರಸ್ತೆ’ (ಒಬಿಒಆರ್) ಯೋಜನೆ ಕುರಿತಂತೆ ಭಾರತದ ನಿಲುವಿಗೆ ನೆದರ್‌ಲೆಂಡ್ ಬೆಂಬಲ ವ್ಯಕ್ತಪಡಿಸಿದೆ. 

ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂಪರ್ಕ ಕಲ್ಪಿಸುವ ಯತ್ನಗಳು ಆಯಾ ರಾಷ್ಟ್ರಗಳ ಸಾರ್ವಭೌಮತ್ವವನ್ನು ಗೌರವಿಸುವ ರೀತಿಯಲ್ಲಿ ಇರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ನೆದರ್‌ಲೆಂಡ್ ಪ್ರಧಾನಿ ಮಾರ್ಕ್‌ ರುಟ್ ಅಭಿಪ್ರಾಯಪಟ್ಟಿದ್ದಾರೆ.

ಗುರುವಾರ ದೆಹಲಿಗೆ ಬಂದಿಳಿದ ರುಟ್‌ ಅವರು ಪ್ರಧಾನಿ ಮೋದಿ ಅವರನ್ನು ಹೈದರಾಬಾದ್ ಹೌಸ್‌ನಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದರು.

‘ಈ ರೀತಿಯ ಯತ್ನಗಳು ಅಂತರರಾಷ್ಟ್ರೀಯ ನಿಯಮಾವಳಿ, ಉತ್ತಮ ಆಡಳಿತ, ಕಾನೂನು, ಸಾಮಾಜಿಕ ಮತ್ತು ಪ್ರಾದೇಶಿಕ ಮಾನದಂಡ, ಆರ್ಥಿಕ ಹೊಣೆಗಾರಿಕೆಯ ನಿಯಮಗಳಿಗೆ ಅನುಗುಣವಾಗಿ ಇರಬೇಕು ಎಂದು ನಾಯಕರು ಹೇಳಿದ್ದಾರೆ’ ಎಂದು ಮಾತುಕತೆ ಬಳಿಕ ತಿಳಿಸಲಾಗಿದೆ.

ಉಭಯ ರಾಷ್ಟ್ರಗಳ ನಡುವೆ ಕೃಷಿ ಮತ್ತು ನೀರಾವರಿಯಲ್ಲಿ ಸಹಕಾರ ಹೆಚ್ಚಿಸಲು, ವ್ಯಾಪಾರ ಹಾಗೂ ಆರ್ಥಿಕ ಬಾಂಧವ್ಯ ವಿಸ್ತರಿಸಲು ಇಬ್ಬರೂ ನಾಯಕರು ಒಪ್ಪಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT