ಹಲಕಿ ಗ್ರಾಮ ದೇವಿ ಕಣ್ಣಲ್ಲಿ ನೀರು!

7

ಹಲಕಿ ಗ್ರಾಮ ದೇವಿ ಕಣ್ಣಲ್ಲಿ ನೀರು!

Published:
Updated:
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಹಲಕಿ ಗ್ರಾಮದ ದ್ಯಾಮವ್ವ ಮೂರ್ತಿ

ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲ್ಲೂಕಿನ ಹಲಕಿ ಗ್ರಾಮದಲ್ಲಿರುವ ದ್ಯಾಮವ್ವ ದೇವತೆಯ ಕಲ್ಲಿನ ಮೂರ್ತಿಯ ಎರಡೂ ಕಣ್ಣುಗಳಿಂದ ಬುಧವಾರ ಕಣ್ಣೀರು ಜಿನುಗುತ್ತಿರುವುದನ್ನು ಕಂಡು ಗ್ರಾಮಸ್ಥರು ವಿಸ್ಮಯಕ್ಕೆ ಒಳಗಾದರು.

ಎಂದಿನಂತೆ ಬೆಳಿಗ್ಗೆ ಪೂಜೆ ಮಾಡಲು ಭೀಮಪ್ಪ ಪೂಜೇರ ಅವರು ದೇವಸ್ಥಾನಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಪೂಜೆಗೆಂದು ಬಂದಿದ್ದ ಮಹಿಳೆಯರು ಆತಂಕಕ್ಕೆ ಒಳಗಾದರು. ತಮ್ಮ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಗಮನಕ್ಕೆ ತಂದರು. ಈ ಸುದ್ದಿಯು ಅಕ್ಕಪಕ್ಕದ ಹಳ್ಳಿಗಳಿಗೆ ಹರಡಿ, ತಂಡೋಪತಂಡವಾಗಿ ಗ್ರಾಮಸ್ಥರು ಬಂದು ದೇವಿಯ ದರ್ಶನ ಪಡೆದರು.

‘ಹಲವು ವರ್ಷಗಳ ಹಿಂದೆಯೇ ದೇವಸ್ಥಾನ ನಿರ್ಮಿಸಲಾಗಿದೆ. ಪ್ರತಿದಿನ ಪೂಜೆ ಮಾಡುವುದು. ಉಡಿ ತುಂಬುವುದು, ವರ್ಷಕ್ಕೊಮ್ಮೆ ಜಾತ್ರೆ ಮಾಡುವುದು ನಡೆದುಕೊಂಡುಬಂದಿದೆ. ಆದರೆ, ಈಗ ದೇವಿಯ ಕಣ್ಣಿನಲ್ಲಿ ನೀರು ಬಂದಿರುವುದನ್ನು ನೋಡಿ ಆತಂಕವಾಗಿದೆ’ ಎಂದು ಗ್ರಾಮಸ್ಥ ಚಂದ್ರಗೌಡ ಗೌಡರ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !