ಮನೆಯಲ್ಲಿ ಬೆಳೆದ ಹುತ್ತ

7
ಗ್ರಾಮಸ್ಥರಿಂದ ನಿತ್ಯ ಪೂಜೆ

ಮನೆಯಲ್ಲಿ ಬೆಳೆದ ಹುತ್ತ

Published:
Updated:
ಹಲಕಿ ಗ್ರಾಮದ ಮನೆಯೊಂದರಲ್ಲಿ ಬೆಳೆದ ಹುತ್ತ

ಯರಗಟ್ಟಿ: ಹಲಕಿ ಗ್ರಾಮದೇವಿ ಕಣ್ಣೀರಿನ ಪವಾಡ ವಿಷಯ ಮಾಸುವ ಮುನ್ನ ಅದೇ ಗ್ರಾಮದ ಮನೆಯೊಂದರಲ್ಲಿ ಹುತ್ತ ಬೆಳೆದು ಅಚ್ಚರಿ ಮೂಡಿಸಿದೆ. 

ಕಳೆದ ವರ್ಷದಿಂದ ಗ್ರಾಮದ ಭೀಮಶೆಪ್ಪ ತಳವಾರ ಕುಟುಂಭಕ್ಕೆ ಸೇರಿದ ಜನತಾ ಮನೆಯಲ್ಲಿ ಕೊಠಡಿ ಇಬ್ಭಾಗ ಮಾಡಿದ ನಾಲ್ಕು ಅಡಿಯ ಎತ್ತರದ ಗೋಡೆಯ ಮೇಲೆ ಸುಮಾರು ಮೂರು ಅಡಿ ಎತ್ತರದ ಮಣ್ಣಿನ ಹುತ್ತ ಬೆಳೆದಿದೆ.

ಭೀಮಶೆಪ್ಪ ಅವರ ಪತ್ನಿ ಕೋಟೂರ ಗ್ರಾಮದ ಪರಮಾನಂದ ದೇವರ ಪರಮ ಭಕ್ತೆ. ನಿತ್ಯ ಪೂಜೆ ಪುನಸ್ಕಾರ ಮಾಡುತ್ತಿದ್ದ ಅವರು ಹಬ್ಬದ ದಿನ ಗೋಡೆ ಸ್ವಚ್ಛ ಮಾಡಲು ಹೋದಾಗ ಸಣ್ಣ ಹುತ್ತ ಕಾಣಿಸಿದೆ. ಮನೆಯವರು ಪ್ರತಿ ಅಮವಾಸ್ಯೆ, ಹುಣ್ಣಿಮೆ ದಿನ ಸ್ವಚ್ಛ ಮಾಡುತ್ತಾರೆ. ಆದರೂ ಹುತ್ತ ಕ್ರಮೇಣ ಬೆಳೆಯಲಾರಂಭಿಸಿದೆ. ಇದರಿಂದ ಬೇಸತ್ತು ಕುಟುಂಬದ ಸದಸ್ಯರು ದೇವರ ಮೊರೆ ಹೋದರು.

‘ಹುತ್ತ ತೆರವುಗೊಳಿಸಬಾರದು, ನಿಮ್ಮ ಮನೆ ದೇವರ ಆಶೀರ್ವಾದ ನಿಮ್ಮ ಮೇಲೆ ಸದಾ ಇದೆ, ಅದನ್ನು ನಿತ್ಯ ಪೂಜೆ ಮಾಡಿ, ಅದರಿಂದ ನಿಮಗೆ ಒಳ್ಳೆಯದಾಗುತ್ತದೆ’ ಎಂದು ಸ್ವಾಮೀಜಿಯೊಬ್ಬರು ಅವರಿಗೆ ಹೇಳಿದ್ದಾರೆ. ಅದಕ್ಕೆ ಹದರಿ ಅವರು ಮನೆ ತೊರೆದಿದ್ದಾರೆ.

‘ಅಂದಿನಿಂದ ಅಕ್ಕಪಕ್ಕದವರು ಹಾಗೂ ಮನೆಯ ಸದಸ್ಯರು ಹುತ್ತಕ್ಕೆ ಪೂಜೆ ಸಲ್ಲಿಸುತ್ತಾರೆ. ಈ ಮನೆಯ ಸುತ್ತಲು ದೊಡ್ಡ ಕಲ್ಲು ಬಂಡೆಗಳು, ಹೊಲ ಗದ್ದೆಗಳು ಇವೆ. ಅದರಂತೆ ಮನೆಯಲ್ಲಿಯ ಹುತ್ತ ಪೂಜೆ ಸಲ್ಲಿಸಿದಂತೆ ಮನೆಯವರಿಗೆ ಹಾನಿಯಾಗದೆ, ಕಾರ್ಯ ಸಿದ್ಧಿಯಾಗಿವೆ’ ಎಂದು ಭೀಮಶೆಪ್ಪ ತಳವಾರ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !