ಹುಕ್ಕೇರಿ: ಪಟ್ಟಣದ ಹಳ್ಳದಕೇರಿಯ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘ, ವಿಜಯ ರವದಿ ಸಮಾಜ ಸೇವಾ ಸಂಘ, ಪತಂಜಲಿ ಯೋಗ ಸಮಿತಿ, ಸಂತ ನಿರಂಕಾರಿ ಮಂಡಳ, ಅಡವಿ ಸಿದ್ಧೇಶ್ವರ ಮತ್ತು ಸಿದ್ಧಿ ವಿನಾಯಕ ಭಜನಾ ಮಂಡಳಿ, ಬ್ರಹ್ಮವಿದ್ಯಾ ಸತ್ಸಂಗದಿಂದ ಭಾನುವಾರ ರಾತ್ರಿ ‘ಮಹಾಶಿವರಾತ್ರಿ ಅಂಗವಾಗಿ ಸಾಮೂಹಿಕವಾಗಿ ‘ಓಂ ನಮಃ ಶಿವಾಯ’ ಮಂತ್ರ ಜಪ ಜರುಗಿತು.

ಕರಗಾಂವ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಇಮಾಮಸಾಬ್ ಮುಲ್ತಾನಿ ಮುಖ್ಯ ಅತಿಥಿಯಾಗಿ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ವಿವಿಧ ಹಬ್ಬಗಳ ಮೂಲಕ ಜನರು ಸಂತೃಪ್ತಿ ಬದುಕು ಸಾಗಿಸುವ ಸಂದೇಶ ನೀಡಿವೆ. ಶಿವನ ವಿವಿಧ ಅವತಾರದ ಕಥೆಯ ಮೂಲಕ ಮಹಾಶಿವರಾತ್ರಿಯ ಕುರಿತು ನೆರೆದ ಭಕ್ತರನ್ನು ಉದ್ಧೇಶಿಸಿ ಮಾತನಾಡಿದರು.

ಎಸ್.ಎಸ್.ಎನ್.ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪಿ.ಜಿ.ಕೊಣ್ಣೂರ್ ಮಾತನಾಡಿದರು. ವಿಜಯ ರವದಿ ಅಧ್ಯಕ್ಷತೆ ವಹಿಸಿದ್ದರು.

ಶಂಕರಲಿಂಗ ಗೀತಾ ಪಾರಾಯಣ ಮಹಿಳಾ ಸಂಘದವರು ಪ್ರಾರ್ಥಿಸಿದರು. ಅಡವಿ ಸಿದ್ಧೇಶ್ವರ ಮತ್ತು ಸಿದ್ಧಿ ವಿನಾಯಕ ಭಜನಾ ಮಂಡಳಿಯವರು ಶಿವನ ಭಜನೆ ಮಾಡಿದರು.

ಲಿಂಗಾಯತ ಸಮಾಜ ಅಭಿವೃದ್ಧಿ ಸೇವಾ ಸಂಘದ ಅಧ್ಯಕ್ಷ ನಿಂಗೌಡ ಪಾಟೀಲ, ಕಾರ್ಯದರ್ಶಿ ಶಂಕರ ಅಲಗರಾವುತ್, ಅಕ್ಕನ ಬಳಗದ ಅಧ್ಯಕ್ಷೆ ಪಲ್ಲವಿ ನಾಯಿಕ, ಗುರುಶಾಂತೇಶ್ವರ ವಧು ವರರ ಸಂಘದ ಅಧ್ಯಕ್ಷ ಶಿವಾನಂದ ಜಿರ್ಲಿ, ಸಿದ್ಧು ಬೆನ್ನಾಡಿಕರ, ಜಾನಪದ ಕಲಾ ಪರಿಷತ್ ಘಟಕದ ಅಧ್ಯಕ್ಷ ಸುಭಾಸ ನಾಯಿಕ, ಮುಖಂಡರಾದ ಚಂದು ಗಂಗನ್ನವರ, ದುರದುಂಡಿ ನಾಯಿಕ, ಬಸವರಾಜ ಕುಂಬಾರ, ಬಾಬುಗೌಡ ಪಾಟೀಲ್, ವಕೀಲ ಕೆ.ಪಿ.ಶಿರಗಾಂವಕರ್, ಶಿಕ್ಷಕ ಕುಮಾರ ಬಡಿಗೇರ್, ಪತಂಜಲಿ ಯೋಗ ಶಿಕ್ಷಕ ಬಾಳಕೃಷ್ಣ ಕೋಳೆಕರ್ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.

ಶಿಕ್ಷಕ ಕುಮಾರ ಬಡಿಗೇರ್ ಸ್ವಾಗತಿಸಿದರು. ಚಂದು ಗಂಗನ್ನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ.ಪಿ.ಶಿರಗಾಂವಕರ ಮತ್ತು ಶಿವಾನಂದ ಜಿರ್ಲಿ ನಿರೂಪಿಸಿದರು. ಶಂಕರ ಅಲಗರಾವುತ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.