ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಲಗಿ | ಪತ್ನಿ ಜತೆ ಅಸಭ್ಯ ವರ್ತನೆ; ಪ್ರಶ್ನಿಸಿದ ಗಂಡನಿಗೆ ಚಾಕು ಇರಿತ

Published 29 ಫೆಬ್ರುವರಿ 2024, 15:54 IST
Last Updated 29 ಫೆಬ್ರುವರಿ 2024, 15:54 IST
ಅಕ್ಷರ ಗಾತ್ರ

ಮೂಡಲಗಿ: ಮಹಿಳೆಯನ್ನು ಪೀಡಿಸಿದ ವಿಷಯವಾಗಿ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬರಿಗೆ ಚಾಕುವಿನಿಂದ ಇರಿದ ಘಟನೆ ತಾಲ್ಲೂಕಿನ ತುಕ್ಕಾನಟ್ಟಿಯಲ್ಲಿ ಬುಧವಾರ ನಡೆದಿದೆ.

ಸಿದ್ದಪ್ಪ ಮಾದರ ಚಾಕು ಇರಿತಕ್ಕೆ ಒಳಗಾದವರು. ಇದೇ ಗ್ರಾಮದ ಆನಂದ ರಾಮಪ್ಪ ಹುಲಕುಂದ ಹಾಗೂ ಮೂವರು ಸೇರಿಕೊಂಡು ಮಾರಣಾಂತಿಕ ಹಲ್ಲೆ ಮಾಡಿದ್ದಾರೆ ಎಂದು ಸಿದ್ದಪ್ಪ ಅವರ ಪುತ್ರ ದೂರು ದಾಖಲಿಸಿದ್ದಾರೆ.

‘ನಮ್ಮ ತಾಯಿ ತುಕ್ಕಾನಟ್ಟಿಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಆನಂದ ಎಂಬ ವ್ಯಕ್ತಿ ಅವರನ್ನು ಪದೇ ಪದೇ ಕಾಡುತ್ತಿದ್ದ. ಈ ಬಗ್ಗೆ ನನ್ನ ತಂದೆ ಹಾಗೂ ನಾನು ಸಾಕಷ್ಟು ಬಾರಿ ಮನವಿ ಮಾಡಿದರೂ ಸುಮ್ಮನಿರಲಿಲ್ಲ. ಬುಧವಾರ ಗ್ರಾಮದ ಮಾರುಕಟ್ಟೆ ಬಳಿ ಕೆಲಸ ಮಾಡುತ್ತಿದ್ದಾಗ ಆರೋಪಿ ಅಸಭ್ಯವಾಗಿ ನಡೆದುಕೊಂಡ. ಇದನ್ನು ಪ್ರಶ್ನಿಸಲು ಹೋದ ನನ್ನ ತಂದೆಗೆ ಚಾಕುವಿನಿಂದ ಇರಿದ. ಅವರನ್ನು ಬಿಡಿಸಲು ಮುಂದಾದ ನನಗೆ ಹಾಗೂ ನನ್ನ ತಾಯಿ ಮೇಲೆ ಹಲ್ಲೆ ಮಾಡಿದ. ಆರೋಪಿ ಜತೆಗೆ ಇತರ ಮೂವರೂ ಸೇರಿಕೊಂಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಚಾಕು ಇರಿತಕ್ಕೊಳಗಾದ ವ್ಯಕ್ತಿ ಮೂಡಲಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT